ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು, ನ. ೨೩: ಪಂಚಾಯಿತಿಯ ಹಾಗೂ ನಾಗರಿಕರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ೧೫ ಲಕ್ಷ ವೆಚ್ಚದಲ್ಲಿ ಆಧುನಿಕ ಶೈಲಿಯ ಉದ್ಯಾನವನ, ಆಸನದ ವ್ಯವಸ್ಥೆ ಸೇರಿದಂತೆ ಜಿಮ್ ಕ್ಲಾಸ್ ಆರಂಭಿಸಲು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವಿಶೇಷ ಪ್ರಯತ್ನ ನಡೆಸಿದೆ. ಈಗಾಗಲೇ ಪೊನ್ನಂಪೇಟೆಯ ಹೃದಯ ಭಾಗದಲ್ಲಿ ಉತ್ತಮ ಉದ್ಯಾನವನ ನಿರ್ಮಿಸಲು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದು ವಿನೂತನ ಮಾದರಿಯ ಉದ್ಯಾನವನದ ನೀಲನಕ್ಷೆ ತಯಾರಾಗಿದೆ.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಗಿರಿಜ ವೆಂಕಟೇಶ್, ಉಪಾಧ್ಯಕೆÀ್ಷ ಬೊಟ್ಟಂಗಡ ದಶಮಿ ಹಾಗೂ ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾಮಗಾರಿ ಆರಂಭಗೊAಡಿದ್ದು ಈ ಹಿಂದೆ ಕಸ ಸುರಿಯುತ್ತಿದ್ದ ಸ್ಥಳವನ್ನು ನೂತನ ಉದ್ಯಾನವನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿದ್ದ ಕಸದ ರಾಶಿಯನ್ನು ಈ ಸ್ಥಳದಿಂದ ತೆರವುಗೊಳಿಸಲಾಗಿದೆ.

ಪೊನ್ನಂಪೇಟೆ ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದು ಇದೀಗ ಗೋಣಿಕೊಪ್ಪ, ಪೊನ್ನಂಪೇಟೆ ಮುಖ್ಯ ರಸ್ತೆಗೆ ಹೊಂದಿಕೊAಡಿರುವ ತಹಶೀಲ್ದಾರರ ಕಚೇರಿಯ ಸಮೀಪ ಈ ಉದ್ಯಾನವನವು ನಿರ್ಮಾಣವಾಗಲಿದೆ. ಆ ಮೂಲಕ ಪೊನ್ನಂಪೇಟೆ ನಗರವನ್ನು ಸುಂದರ ಉದ್ಯಾನವನ್ನಾಗಿಸಲು ಆಡಳಿತ ಮಂಡಳಿ ಶ್ರಮ ಪಟ್ಟಿದೆ. ಕಸ ತುಂಬಿದ ಸ್ಥಳವನ್ನು ಈಗಾಗಲೇ ಸಂಪೂರ್ಣ ಸ್ವಚ್ಛಗೊಳಿಸಿ ಈ ಸ್ಥಳವನ್ನು ಮಣ್ಣು ತೆಗೆಯುವ ಯಂತ್ರಗಳಿAದ ಸಮತಟ್ಟು ಮಾಡಲಾಗಿದೆ. ಕಮ್ಯೂನಿಟಿ ಪಾರ್ಕ್

ಪಂಚಾಯಿತಿ ಸ್ವಾಧೀನದ ಜಾಗದಲ್ಲಿ ಈ ಹಿಂದೆ ಕಸವನ್ನು ಹಾಕಲಾಗುತ್ತಿತ್ತು. ಇದೀಗ ಸರ್ವ ಆಡಳಿತ ಮಂಡಳಿಯ ಸದಸ್ಯರ ನಿರ್ಧಾರದಂತೆ ಈ ಸ್ಥಳವನ್ನು ಕಸ ಮುಕ್ತಗೊಳಿಸಿ ಇದೇ ಜಾಗದಲ್ಲಿ ಉದ್ಯಾನವನವನ್ನು ನಿರ್ಮಿಸಲು ಪಂಚಾಯಿತಿ ಮುಂದಾಗಿದೆ. ಈಗಾಗಲೇ ಈ ಜಾಗವನ್ನು ಉದ್ಯಾನವನ ಮಾಡಲು ೭ ಲಕ್ಷ ಪಂಚಾಯಿತಿ ಅನುದಾನವನ್ನು ಬಳಕೆ ಮಾಡಲಾಗಿದ್ದು ಇಲ್ಲಿದ್ದ ಕಸದ ರಾಶಿಗಳನ್ನು ತೆರವುಗೊಳಿಸಲಾಗಿದೆ. ಪ್ಲಾಸ್ಟಿಕ್‌ಗಳನ್ನು ಕಾರ್ಖಾನೆಗಳಿಗೆ ಕಳುಹಿಸಿಕೊಡಲಾಗಿದೆ.

ಉದ್ಯಾನವನದ ನಿರ್ಮಾಣಕ್ಕಾಗಿ ಕೊಡಗು ಜಿಲ್ಲಾ ಪಂಚಾಯಿತಿಯಿAದ ೧೫ ಲಕ್ಷ ಅನುದಾನ ಮಂಜೂರಾಗಿದೆ. ಈ ಅನುದಾನದಿಂದ ಜಾಗದ ಸುತ್ತಲೂ ಬೇಲಿ ಸೇರಿದಂತೆ ಇನ್ನಿತರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ೧೫ನೇ ಹಣಕಾಸು ಯೋಜನೆ ಹಾಗೂ ಪಂಚಾಯಿತಿ ನಿಧಿಯಿಂದ ೭ ಲಕ್ಷ ಅನುದಾನವನ್ನು ಈಗಾಗಲೇ ಇಲ್ಲಿನ ಕೆಲಸಗಳಿಗೆ ಬಳಕೆ ಮಾಡಲಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ ಮಣ್ಣನ್ನು ತುಂಬಿಸುವ ಕೆಲಸ ನಡೆಯುತ್ತಿದೆ. ಮುಂದೆ ಬೇಲಿ ನಿರ್ಮಾಣ, ಸೋಲಾರ್ ದೀಪಗಳು, ಔಟ್‌ಡೋರ್ ಜಿಮ್, ಇಂಟರ್‌ಲಾಕ್, ಲಾನ್ ಸೇರಿದಂತೆ ವಯಸ್ಕರಿಗೆ ಕುಳಿತುಕೊಳ್ಳಲು ಕಲ್ಲು ಬೆಂಚು ಆಸನದ ವ್ಯವಸ್ಥೆ ಮಾಡಲಾಗುತ್ತದೆ.

-ಬೊಟ್ಟಂಗಡ ದಶಮಿ, ಉಪಾಧ್ಯಕ್ಷರು, ಪೊನ್ನಂಪೇಟೆ ಗ್ರಾ.ಪಂ.