ಮಡಿಕೇರಿ, ನ. ೨೩: ಶನಿವಾರಸಂತೆ ಹೋಬಳಿ ಮಟ್ಟದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯನ್ನು ಪುನರ್ ರಚಿಸಲಾಗಿದೆ.

ಹಾಲಿ ಅಧ್ಯಕ್ಷ ಜೆ.ಆರ್.ಪಾಲಾಕ್ಷ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲು ನಿರ್ಧರಿಸಿ, ಕಾರ್ಯದರ್ಶಿಯನ್ನಾಗಿ ಎಂ.ಎಸ್. ವೀರೇಂದ್ರ ಮಾದ್ರೆ, ಸಹ ಕಾರ್ಯ ದರ್ಶಿಗಳಾಗಿ ಕೆ.ಪಿ. ಜೈಕುಮಾರ್ ಕೆ.ಡಿ. ಜಗದೀಶ್ ಕಿತ್ತೂರು, ಗೌರವ ಅಧ್ಯಕ್ಷರುಗಳನ್ನಾಗಿ ಮೈಲಾಪುರದ ಸಿದ್ದಣ್ಣ, ಎಸ್. ಜೆ. ರಾಜಪ್ಪ, ಹೆಚ್.ಬಿ. ಜಯಮ್ಮ, ಖಜಾಂಚಿಯನ್ನಾಗಿ ಮಂಜಯ್ಯ ಹಾಗೂ ಡೀಲಕ್ಷ ಮಾದ್ರೆ ಪ್ರಧಾನ ಅವರನ್ನು ನೇಮಕ ಮಾಡಲಾಯಿತು.

ಉಪಾಧ್ಯಕ್ಷರುಗಳನ್ನಾಗಿ ದೇವರಾಜ್ ಮೆಣಸ, ವೀರಭದ್ರ ಹೆಮ್ಮನೆ, ಸಿ.ಡಿ.ರಾಜು, ಉಮೇಶ್ (ಗುಂಡ), ಸಮಿತಿಯ ಸದಸ್ಯರು ಗಳನ್ನಾಗಿ ನಾಗರಾಜ್ ಮುದ್ರವಳ್ಳಿ, ಮಂಜುನಾಥ್ ಮಾದ್ರೆ ಸೇರಿದಂತೆ ಹಲವರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡಲಾಯಿತು.

ಡಿ. ೬ ರಂದು ಬೆಂಗಳೂರಿನಲ್ಲಿ ನಡೆಯುವ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮಕ್ಕೆ ಹೋಬಳಿಯಿಂದ ಕಾರ್ಯಕರ್ತರನ್ನು ಕರೆದುಕೊಂಡು ಹೋಗುವ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಪ್ರಮುಖರಾದ ಕೆ.ಪಿ.ಜೈಕುಮಾರ್ ಒಗ್ಗೂಡುವ ಮನಸ್ಸು ಪ್ರತಿಯೊಬ್ಬರಲ್ಲೂ ಇರಬೇಕು. ಆಗ ಮಾತ್ರ ಹೋರಾಟಗಳಿಗೆ ಯಶಸ್ಸು ದೊರೆಯಲು ಸಾಧ್ಯ ಎಂದರು.

ಅಧ್ಯಕ್ಷ ಜೆ.ಆರ್. ಪಾಲಾಕ್ಷ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖರಾದ ಎಸ್.ಜೆ.ರಾಜಪ್ಪ, ಶಿವಲಿಂಗ, ದಯಾನಂದ, ಸುತ್ತಮುತ್ತಲ ಗ್ರಾಮ ಶಾಖೆಗಳ ಪದಾಧಿಕಾರಿಗಳು, ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.