ಪೊನ್ನಂಪೇಟೆ, ನ. ೨೩: ನವೆಂಬರ್ ೧೩ರಂದು ನೇಪಾಳದ ಪೊಖರದಲ್ಲಿ ನಡೆದ ಅಂತರರಾಷ್ಟಿçÃಯ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿ ಪಿ.ಎಂ. ನವೀನ್ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಸ್ವರ್ಣ ಪದಕಕ್ಕೆ ಭಾಜನರಾಗಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹಾಗೂ ೨೦೨೩ ರ ಮಾರ್ಚ್ನಲ್ಲಿ ಮಲೇಷಿಯಾದಲ್ಲಿ ನಡೆಯಲಿರುವ ಅಂತರರಾಷ್ಟಿçÃಯ ಥ್ರೋ ಬಾಲ್ ಪಂದ್ಯಾವಳಿಗೂ ನವೀನ್ ಆಯ್ಕೆಯಾಗಿದ್ದಾರೆ. ಇವರು ಗೋಣಿಕೊಪ್ಪಲುವಿನ ಮನೋಜ್ ಕುಮಾರ್ ಮತ್ತು ಪುಷ್ಪ ದಂಪತಿಯ ಪುತ್ರ.