ಮಡಿಕೇರಿ, ನ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಡಿಕೇರಿ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ-ಬಾಲಕಿಯರ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಕೂಡಿಗೆ, ಮೈಸೂರು, ಬೆಂಗಳೂರು ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಬೆಂಗಳೂರು ತಂಡ ಬೆಳಗಾವಿ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿದರೆ, ಮೈಸೂರು ತಂಡ ಕಲಬುರ್ಗಿ ತಂಡವನ್ನು ೬-೧ ಗೋಲುಗಳ ಅಂತರದಿAದ ಮಣಿಸಿತು. ಕೂಡಿಗೆ ತಂಡ ಬೆಳಗಾವಿ ತಂಡವನ್ನು ೬-೧ ಗೋಲುಗಳ ಅಂತರದಿAದ ಸೋಲಿಸಿತು. ಬಾಲಕಿಯರ ವಿಭಾಗದಲ್ಲಿ ಕೂಡಿಗೆ ತಂಡ ಬೆಳಗಾವಿ ತಂಡವನ್ನು ೩-೦ ಅಂತರದಿAದ ಸೋಲಿಸಿದರೆ, ಮೈಸೂರು ತಂಡ ಬೆಂಗಳೂರು ತಂಡವನ್ನು ಭರ್ಜರಿ ೯-೦ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಕಲಬುರಗಿ ತಂಡ ಬೆಂಗಳೂರು ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿದರೆ, ಮೈಸೂರು ತಂಡ ಬೆಳಗಾವಿ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಮುನ್ನಡೆಯಿತು. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡ ಬೆಂಗಳೂರು ತಂಡವನ್ನು

೨-೦ ಗೋಲಿನಿಂದ ಸೋಲಿಸಿದರೆ, ಮೈಸೂರು ತಂಡ ಕಲಬುರಗಿ ತಂಡವನ್ನು ೩-೦ ಗೋಲಿನಿಂದ ಮಣಿಸಿ ಮುನ್ನಡೆ ಸಾಧಿಸಿದೆ.