ಮಡಿಕೇರಿ, ನ. ೨೨: ಸಹಕಾರ ಇಲಾಖೆಯಲ್ಲಿ ಜಾರಿಯಲ್ಲಿದ್ದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ೨೦೨೨-೨೩ನೇ ಸಾಲಿಗೆ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ೨೦೨೨-೨೩ ನೇ ಸಾಲಿಗೆ ೨೦೨೨ರ ನವೆಂಬರ್ ೧ ರಿಂದ ಮರು ಜಾರಿಗೊಳಿಸಿದೆ.
ಗ್ರಾಮೀಣ ಸಹಕಾರ ಸಂಘಗಳ/ ಸ್ವ-ಸಹಾಯ ಗುಂಪುಗಳ ಗರಿಷ್ಟ ೪ ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ. ೫೦೦ಗಳ ವಂತಿಕೆ ಯನ್ನು ಮತ್ತು ೪ ಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ. ೧೦೦ಗಳನ್ನು ಮಡಿಕೇರಿ, ನ. ೨೨: ಸಹಕಾರ ಇಲಾಖೆಯಲ್ಲಿ ಜಾರಿಯಲ್ಲಿದ್ದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ೨೦೨೨-೨೩ನೇ ಸಾಲಿಗೆ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ೨೦೨೨-೨೩ ನೇ ಸಾಲಿಗೆ ೨೦೨೨ರ ನವೆಂಬರ್ ೧ ರಿಂದ ಮರು ಜಾರಿಗೊಳಿಸಿದೆ.
ಗ್ರಾಮೀಣ ಸಹಕಾರ ಸಂಘಗಳ/ ಸ್ವ-ಸಹಾಯ ಗುಂಪುಗಳ ಗರಿಷ್ಟ ೪ ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ. ೫೦೦ಗಳ ವಂತಿಕೆ ಯನ್ನು ಮತ್ತು ೪ ಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ. ೧೦೦ಗಳನ್ನು ಕಾರ್ಡ್ ಹೊಂದಿರುವವರು ಯಶಸ್ವಿನಿ ಕಾರ್ಡ್ ಪಡೆಯಲು ಯಾವುದೇ ನಿರ್ಬಂದ ಇರುವುದಿಲ್ಲ. ಆದರೆ ಫಲಾನುಭವಿಗಳು ಯಾವುದಾದರು ಒಂದು ಯೋಜನೆಯಲ್ಲಿ ಮಾತ್ರ ವ್ಯೆದ್ಯಕೀಯ ಚಿಕಿತ್ಸೆ/ ಶಸ್ತç ಚಿಕಿತ್ಸಾ ವೆಚ್ಚವನ್ನು ಪಡೆಯಲು ಅವಕಾಶವಿದೆ.
ಈ ಯೋಜನೆಯಡಿಯಲ್ಲಿ ನೋಂದಾಯಿತ ಸದಸ್ಯರುಗಳಿಗೆ ಯೂನಿಕ್ ಐ.ಡಿ ಸಂಖ್ಯೆಯುಳ್ಳ ಕಾರ್ಡನ್ನು ಒದಗಿಸಲಾಗುವುದು. ಈ ಕಾರ್ಡ್ನ್ನು ಬಳಸಿ ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸುಮಾರು ೧೬೫೦ ಕಾಯಿಲೆಗಳಿಗೆ ಗರಿಷ್ಟ ಮಿತಿ ರೂ. ೫ ಲಕ್ಷಗಳವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕ್‌ಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಎಪಿಸಿಎಂಎಸ್ ಇವುಗಳನ್ನು ಸಂಪರ್ಕಿಸಿ ಅರ್ಜಿ ನಮೂನೆ ಯನ್ನು ಪಡೆದುಕೊಂಡು ಕೂಡಲೇ ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗೆ ಸಹಕಾರ ಸಂಘಗಳ ಉಪ ನಿಬಂಧಕರು, ಕೊಡಗು ಜಿಲ್ಲೆ, ಮಡಿಕೇರಿ ಇವರ ಕಚೇರಿ ದೂ: ೦೮೨೭೨-೨೨೮೫೧೯ ಅಥವಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ ಉಪವಿಭಾಗ, ಮಡಿಕೇರಿ ಕಚೇರಿ ದೂ: ೦೮೨೭೨-೨೨೫೭೨೮ ನ್ನು ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.