ಚೆಯ್ಯಂಡಾಣೆ, ನ. ೨೧: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿ ವತಿಯಿಂದ ನರಿಯಂದಡÀ, ಕೋಕೇರಿ, ಚೇಲಾವರ ಗ್ರಾಮಸ್ಥರಿಗೆ ಆಯೋಜಿಸಲಾದ ಕ್ರೀಡಾ ಕೂಟ ಯಶಸ್ವಿಯಾಗಿ ತೆರೆ ಕಂಡಿತು.

ತಾ. ೧೪ ರಿಂದ ಆರಂಭಗೊAಡ ಕ್ರೀಡಾಕೂಟದಲ್ಲಿ ಗ್ರಾಮಸ್ಥರಿಗೆ ಕ್ರಿಕೆಟ್, ಹಾಕಿ, ವಾಲಿಬಾಲ್, ಥ್ರೋಬಾಲ್, ಟೆನ್ನಿ ಕಾಯಿಟ್, ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ ಹಾಗೂ ಪ್ರೌಢ ಶಾಲಾ ಬಾಲಕ, ಬಾಲಕಿಯರಿಗೆ ೧೦೦ ಮೀಟರ್ ಹಾಗೂ ೨೦೦ ಮೀಟರ್ ರಿಲೇ ಓಟ, ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರಿಗೆ ಓಟದ ಸ್ವರ್ಧೆ, ೬೦ ವರ್ಷ ಮೇಲ್ಪಟ್ಟವರಿಗೆ ನಡಿಗೆ, ಮಹಿಳೆಯರಿಗೆ ಪಾಯಿಸನ್‌ಬಾಲ್, ಅಂಗನವಾಡಿ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವ ಸ್ವರ್ಧೆ ನಡೆಸಲಾಯಿತು.

ವಿಜೇತರು: ಗ್ರಾಮಸ್ಥರ ಕ್ರಿಕೆಟ್‌ನಲ್ಲಿ ನರಿಯಂದಡ ಪ್ರಥಮ, ದ್ವಿತೀಯ ಚೇಲಾವರ, ಹಾಕಿ ಪಂದ್ಯಾಟದಲ್ಲಿ ಚೇಲಾವರ ಪ್ರಥಮ, ಕೋಕೇರಿ ದ್ವಿತೀಯ ಸ್ಥಾನ ಪಡೆಯಿತು.

ವಾಲಿಬಾಲ್‌ನಲ್ಲಿ ಕೋಕೇರಿ ಪ್ರಥಮ, ನರಿಯಂದಡ ದ್ವಿತೀಯ ಸ್ಥಾನ ಪಡೆಯಿತು.

ಫುಟ್‌ಬಾಲ್‌ನಲ್ಲಿ ನರಿಯಂದಡ ಪ್ರಥಮ ಹಾಗೂ ಕೋಕೇರಿ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ಥ್ರ‍್ರೋಬಾಲ್‌ನಲ್ಲಿ ಚೇಲಾವರ ಪ್ರಥಮ, ಕೋಕೇರಿ ದ್ವಿತೀಯ ಸ್ಥಾನ ಗಳಿಸಿದವು.

ಟೆನ್ನಿಕಾಯಿಟ್‌ನಲ್ಲಿ ಚೇಲಾವರ ಪ್ರಥಮ, ನರಿಯಂದಡ ದ್ವಿತೀಯ ಸ್ಥಾನ ಪಡೆದುಕೊಂಡವು.

ಹಗ್ಗ ಜಗ್ಗಾಟದಲ್ಲಿ ನರಿಯಂದಡ ಪ್ರಥಮ, ಕೊಕೇರಿ ದ್ವಿತೀಯ ಸ್ಥಾನ ಪಡೆದು ಕೊಂಡವು.

ತೆAಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಟ್ಟಿಯಂಡ ಮಿಲನ್ ಮಂದಣ್ಣ ಪ್ರಥಮ, ಮುಂಡಿಯೋಳAಡ ದಿನು ಗಣಪತಿ ದ್ವಿತೀಯ, ಪೊಕ್ಕುಳಂಡ್ರ ಮದು ಹಾಗೂ ಮುಂಡಿಯೋಳAಡ ಭುವನ್ ತೃತೀಯ ಬಹುಮಾನ ಪಡೆದುಕೊಂಡರು.

ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಚೋಯಮಂಡ ಚಂಗಪ್ಪ, ಬಿದ್ದಂಡ ರಾಜ ಉತ್ತಪ್ಪ, ಚೈಯಂಡ ಲವ ಅಪ್ಪಚ್ಚು, ಬಾನು ಕಿರಣ್, ಮಹೇಂದ್ರ, ಕವನ್ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆ ಯನ್ನು ಹಾಗೂ ನಿರೂಪಣೆಯನ್ನು ಚೇನಂಡ ಸಂಪತ್ ನಿರ್ವಹಿಸಿದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸಮಿತಿಯ ಅಧ್ಯಕ್ಷ ಮುಂಡಿಯೋಳAಡ ರವಿ ಸೋಮಣ್ಣ ದ್ವಜಾರೋಹಣ ನೆರವೇರಿಸಿದರು. ನಂತರ ನಾಡಗೀತೆ, ಕ್ರೀಡಾ ಜ್ಯೋತಿ ಆಗಮನ, ಪಥ ಸಂಚಲನ ನಡೆಯಿತು. ಕ್ರೀಡಾ ಪಟುಗಳಿಗೆ ಪೋಕುಳಂಡ್ರ ದನೋಜ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಅಪರಾಹ್ನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ರವಿ ಸೋಮಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ.ಬೋಪಯ್ಯ ಆಗಮಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಉಮ್ಮರ್ ಮಾಸ್ಟರ್ ಎಡಪಾಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಸಿ. ಮೀನಾ, ರಾಜ್ಯೋತ್ಸವ ಕ್ರೀಡಾ ಸಮಿತಿಯ ಉಪಾಧ್ಯಕ್ಷ ಜೆಪ್ಪು ದೇವಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಪೆಮ್ಮಂಡ ಕಾವೇರಮ್ಮ, ಮಂಜುಳಾ, ಶಿಕ್ಷಕಿ ದಮಯಂತಿ ಹಾಜರಿದ್ದರು.

ಸ್ವಾಗತವನ್ನು ಚೇನಂಡ ಸಂಪತ್ ಹಾಗೂ ವಂದನೆಯನ್ನು ಚೇನಂಡ ದೀನಾ ಚಂಗಪ್ಪ ನಿರ್ವಹಿಸಿದರು.

-ಅಶ್ರಫ್