ಮಡಿಕೇರಿ, ನ. ೨೨: ಗುಲ್ಬರ್ಗಾ ದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಮೈಸೂರು ಜಿಲ್ಲೆಯ ತಂಡವನ್ನು ೨-೧ ಗೋಲು ಗಳಲ್ಲಿ ಸೋಲಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದೆ.

ಒಟ್ಟು ೧೭ ಮಂದಿ ವಿದ್ಯಾರ್ಥಿನಿ ಯರಲ್ಲಿ ಮಡಿಕೇರಿ ಸರಕಾರಿ ಪದವಿಪೂರ್ವ ಕಾಲೇಜಿನ ೧೪, ಮಾದಪುರ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಇಬ್ಬರು, ಗೋಣಿಕೊಪ್ಪ ವಿದ್ಯಾನಿಕೇತನ ವಿದ್ಯಾಸಂಸ್ಥೆಯ, ವೀರಾಜಪೇಟೆ ಕಾವೇರಿ ಕಾಲೇಜಿನ ತಲಾ ಓರ್ವ ವಿದ್ಯಾರ್ಥಿನಿ ತಂಡ ವನ್ನು ಪ್ರತಿನಿಧಿಸಿದ್ದರು. ಮ್ಯಾನೇಜರ್ ಆಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕ ಚಿದಾನಂದ ಕಾರ್ಯ ನಿರ್ವಹಿಸಿದರು. ನಾಯಕಿಯಾಗಿ ಲಿಖಿತ ಉಪನಾಯಕಿಯಾಗಿ ಸಿಂಚನ ಗಂಗಮ್ಮ, ಆಟಗಾರರಾದ ಕೊಟ್ಟಾರಿ ಲಿಖಿತ, ಯುವರಾಣಿ, ಸೌಮ್ಯ, ರಕ್ಷಿತಾ, ಜಸ್ಮಿತ, ರಶ್ಮಿ, ಬೊಳ್ಳಮ್ಮ, ದೇವಿಕಾ, ಅಕ್ಷತಾ, ಗಾನಶ್ರೀ, ಭೂಮಿಕಾ, ದಿಶಾ ಪೊನ್ನಮ್ಮ, ಅಂಜಲಿಕಾ, ಜನನಿ, ಪ್ರಣಮ್ಯ, ಶ್ರಾವ್ಯ ತಂಡದಲ್ಲಿದ್ದರು.