ಕೊಡ್ಲಿಪೇಟೆ, ನ. ೨೧ : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಡಾ. ಪುನಿತ್ ರಾಜ್ಕುಮಾರ್ ಸ್ಮರಣಾರ್ಥ ಕೊಡ್ಲಿಪೇಟೆ ಹೋಬಳಿ ಮಟ್ಡದ ಡಾ|| ಬಿ.ಆರ್.ಅಂಬೇಡ್ಕರ್ ಕಪ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಯಲ್ಲಿ ಸ್ಟಾರ್ ವಾರಿಯರ್ಸ್ ತಂಡವು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸ್ಟಾರ್ ವಾರಿಯರ್ಸ್ ತಂಡವು ಕೆಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಆಕರ್ಷಕ ಟ್ರೋಫಿ ಮತ್ತು ೨೫ ಸಾವಿರ ನಗದನ್ನು ತನ್ನದಾಗಿಸಿಕೊಂಡರೆ, ರನ್ನರ್ಸ್ ಟ್ರೋಫಿ ಮತ್ತು ೧೫ ಸಾವಿರ ನಗದನ್ನು ಎಂ & ಎಂ ತಂಡ ಪಡೆಯಿತು. ಸರಣಿ ಶ್ರೇಷ್ಠ ಪ್ರಶಸ್ತಿಗೆ ಸ್ಟಾರ್ ವಾರಿಯರ್ಸ್ನ ರಝೀಕ್ ಭಾಜನರಾದರು. ವಿಜೇತ ತಂಡದ ಎಲ್ಲಾ ಆಟಗಾರರಿಗೂ ವೈಯಕ್ತಿಕ ಬಹುಮಾನ ನೀಡಲಾಯಿತು.
ಸ್ಥಳೀಯ ಆಟಗಾರರನ್ನೊಳ ಗೊಂಡ ಜೆ.ಎಲ್. ಜನಾರ್ದನ್ ಪ್ರಾಯೋಜಕತ್ವದ ಶರು ನಾಯಕನಾಗಿರುವ ಜೈ ಭೀಮ್ ತಂಡ, ಶೋಭಿತ್ ಗೌಡ ಪ್ರಾಯೋಜಕತ್ವದ ಪ್ರಸನ್ನ ನಾಯಕನಾಗಿರುವ ಯುವರತ್ನ ತಂಡ, ಆರೀಸ್ ಇಂಜಿನಿಯರ್ ಪ್ರಾಯೋಜಕತ್ವದ ರಮೀಝ್ ನಾಯಕನಾಗಿರುವ ಲಗಾನ್ ತಂಡ, ರಜಾಕ್ ಪ್ರಯೋಜಕತ್ವದ ಡಿಜೆ ರಫೀಕ್ ನಾಯಕನಾಗಿರುವ ರಾಯಲ್ ಕಿಂಗ್ ತಂಡ, ವಸಂತ ಪ್ರಾಯೋಜಕತ್ವದ ಅರ್ಪಿತ್ ನಾಯಕನಾಗಿರುವ ಎಂ&ಎA ತಂಡ ಮತ್ತು ಸಿದ್ದೇಶ್&ಬೋಜ ಪ್ರಯೋಜಕತ್ವದ ಯುವರಾಜ್ ನಾಯಕನಾಗಿರುವ ಸ್ಟಾರ್ ವಾರಿಯರ್ಸ್ ತಂಡಗಳು ಲೀಗ್ ಮಾದರಿಯ ಕೆ.ಪಿ.ಎಲ್ ಚಾಂಪಿಯನ್ ಶಿಪ್ನಲ್ಲಿ ಭಾಗಿಯಾಗಿದ್ದವು.
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಅನಂತ್ ಕುಮಾರ್, ಕೊಡ್ಲಿಪೇಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ಹಿರಿಯ ವಕೀಲರರಾದ ಹೆಚ್.ಎಸ್. ಚಂದ್ರಮೌಳಿ, ಯುವ ಮುಖಂಡ ಡಾ.ಮಂಥರ್ ಗೌಡ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಶನಿವಾರಸಂತೆ ಆರಕ್ಷಕ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಶೋಭಿತ್ ಗೌಡ, ಮಾಜಿ ಅಧ್ಯಕ್ಷ ಔರಂಗಜೇಬ್, ಡಾ. ಉದಯ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೂವಯ್ಯ, ಗ್ರಾ.ಪಂ.ಸದಸ್ಯೆ ನಗೀನ ಭಾನು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ಧನ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಬ್ಯಾಡಗೊಟ್ಟ ಗ್ರಾ.ಪಂ.ಸದಸ್ಯ ಹನೀಫ್ ಮತ್ತು ವಸೀಂ ಕಾರ್ಯಕ್ರಮ ನಿರ್ವಹಿಸಿದರು. ಆಯೋಜಕರಾದ ಪ್ರಸನ್ನ, ಹನೀಫ್ ಕಿರಿಕೊಡ್ಲಿ, ಇಂದ್ರೇಶ್, ಪುನೀತ್, ಅವಿನಾಶ್ ಅವರುಗಳು ಉಪಸ್ಥಿತರಿದ್ದರು.