ಮಡಿಕೇರಿ, ನ. ೨೨: ‘ರಾಷ್ಟಿçÃಯ ಐಕ್ಯತಾ ಸಪ್ತಾಹದ’ ಪ್ರಮಾಣ ವಚನವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೋಧಿಸಿದರು.
ರಾಷ್ಟçದ ಸ್ವಾತಂತ್ರ‍್ಯ ಹಾಗೂ ಐಕ್ಯತೆ ಸಂರಕ್ಷಿಸಲು ಮತ್ತು ಬಲ ಪಡಿಸಲು ಅರ್ಪಣಾ ಮನೋಭಾವ ದಿಂದ ಕೆಲಸ ಮಾಡುತ್ತೇನೆಂದು ಶ್ರದ್ಧಾಪೂರ್ವಕವಾಗಿ ಪ್ರಮಾಣ ಮಾಡುತ್ತೇನೆ. ಅಲ್ಲದೆ ಎಂದಿಗೂ ಹಿಂಸಾಚಾರದಲ್ಲಿ ತೊಡಗುವುದಿಲ್ಲ ವೆಂದು ಮತ್ತು ಮತ, ಭಾಷೆ, ಪ್ರದೇಶ ಅಥವಾ ಇತರ ರಾಜಕೀಯ ಅಥವಾ ಆರ್ಥಿಕ ಕುಂದುಕೊರತೆಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಹಾಗೂ ಸಂವಿಧಾನಾತ್ಮಕ ರೀತಿಯಲ್ಲಿ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಲಾಯಿತು.