ಕಡಂಗ, ನ. ೨೨: ಸ್ಥಳೀಯ ಬದ್ರಿಯ ಮಸೀದಿಯಲ್ಲಿ ದಫ್ ಮತ್ತು ರಾತೀಬ್ ಸಂಘದ ವತಿಯಿಂದ ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿರುವ ಜಿಲಾನಿ ಅಂಡ್ ಪ್ರಯುಕ್ತ ದಫ್ ಪ್ರದರ್ಶನವನ್ನು ಆಕರ್ಷಣೆಯ ರೀತಿಯಲ್ಲಿ ಪ್ರದರ್ಶಿಸಲಾಯಿತು. ಸುಮಾರು ೧೪ ಸದಸ್ಯರ ತಂಡದಲ್ಲಿ ಓರ್ವ ಹೊರ ರಾಜ್ಯದವರಾಗಿದ್ದು ವಿಶೇಷವಾಗಿತ್ತು. ಈ ಪ್ರದರ್ಶನದ ನೇತೃತ್ವವನ್ನು ರಾಶಿಧ್ ಉಸ್ತಾದ ಹಾಗೂ ಸಿರಾಜ್ ನೆರವೇರಿಸಿದರು. ಈ ಇಬ್ಬರನ್ನೂ ಬದ್ರಿಯಾ ಜುಮಾ ಮಸೀದಿ ಮತ್ತು ದಫ್ ಸಂಘದ ವತಿಯಿಂದ ಶುಕ್ರವಾರ ಮಸೀದಿಯಲ್ಲಿ ಸನ್ಮಾನಿಸಲಾಯಿತು. ಮಸೀದಿಯ ಧರ್ಮಗುರು ಶಹಜಾನ್ ಸಕಾಫಿ, ಮಸೀದಿಯ ಅಧ್ಯಕ್ಷರಾದ ಸುಲೇಮಾನ್, ಹಸೀನಾರ್, ಅಬ್ದುಲ್ಲಾ, ಸಲಾಂ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.