ಮಡಿಕೇರಿ, ನ. ೨೨: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಮೂರ್ನಾಡು ವತಿಯಿಂದ ಆಯೋಜಿಸಿರುವ ಜಿಲ್ಲಾಮಟ್ಟದ ಅಂತರ ಗ್ರಾಮಗಳ ಹಿಂದೂ ಹಾಕಿ ಪಂದ್ಯಾವಳಿಗೆ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಗಣ್ಯರು ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂ.ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ ಅಧ್ಯಕ್ಷ ಕಂಬೀರAಡ ಸತೀಶ್ ಮುತ್ತಪ್ಪ , ಮೊದಲ ಪ್ರಯತ್ನದಲ್ಲಿ ೨೫ ತಂಡಗಳು ಭಾಗವಹಿಸುತ್ತಿರುವುದು ಖುಷಿ ತಂದಿದೆ. ಗ್ರಾಮಗಳ ನಡುವೆ ಒಗ್ಗಟ್ಟು ಮೂಡಿಸಲು ಹಿಂದೂ ಸಮಾಜವನ್ನು ಒಂದುಗೂಡಿಸಲು ಕ್ರೀಡಾಕೂಟ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಪಂದ್ಯಾಟ ಆಯೋಜಿಸ ಲಾಗಿದೆ. ಸಂಘದ ಮೂಲಕ ಅನೇಕ ಕ್ರೀಡಾ ಚಟುವಟಿಕೆಯನ್ನು ನಡೆಸಿದ್ದೇವೆ ಎಂದರು.

ಮೂರ್ನಾಡು ಗ್ರಾ.ಪಂ. ಅಧ್ಯಕ್ಷೆ ಬಿ.ಸಿ.ಸುಜಾತ ಮಾತನಾಡಿ, ಕೊಡಗು ಪುಟ್ಟ ಜಿಲ್ಲೆಯಾದರೂ ಕ್ರೀಡಾ ಕ್ಷೇತ್ರದಲ್ಲಿ ಇಲ್ಲಿನ ಆಟಗಾರರು ಸಾಧನೆಗೈದಿದ್ದಾರೆ. ಪ್ರತಿಭೆ ಅನಾವರಣಕ್ಕೆ ಈ ರೀತಿಯ ವೇದಿಕೆ

ಸೃಷ್ಟಿಯಾಗಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಮಾತನಾಡಿ, ಕ್ರೀಡಾಕ್ಷೇತ್ರಕ್ಕೆ ಹಲವರು ಎಲೆಮರೆ ಕಾಯಿಯಂತೆ ಶ್ರಮಿಸಿದ್ದಾರೆ. ಕ್ರೀಡೆಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ವಿಪುಲ ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ಮೂರ್ನಾಡು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪಳಂಗAಡ ಅಪ್ಪಣ್ಣ ಮಾತನಾಡಿ, ಮೂರ್ನಾಡಿನಲ್ಲಿ ಮೈದಾನ ನಿರ್ಮಿಸಲು ಅನೇಕರು ಶ್ರಮಿಸಿದ ಪರಿಣಾಮ ಸುಸಜ್ಜಿತ ಮೈದಾನ ಕ್ರೀಡಾಪಟುಗಳಿಗೆ ದೊರೆತಿದೆ. ಗ್ರಾಮಗಳಲ್ಲಿ ಉತ್ತಮ ಮೈದಾನಗಳಿದ್ದರೆ ಕ್ರೀಡಾಪಟುಗಳಿಗೆ ಸಾಧನೆಗೈಯಲು ಸಹಕಾರಿ ಯಾಗುತ್ತದೆ ಎಂದ ಅವರು, ಜಿಲ್ಲೆಯಿಂದ ಮತ್ತಷ್ಟು ಕ್ರೀಡಾಪಟುಗಳು ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

(ಮೊದಲ ಪುಟದಿಂದ) ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್ ಮಾತನಾಡಿ, ಕೊಡಗಿನಲ್ಲಿ ನಡೆಯುವ ಹಾಕಿ ಪಂದ್ಯಾವಳಿ ವಿಶ್ವ ಮನ್ನಣೆ ಪಡೆದಿದೆ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಈ ರೀತಿಯ ಕ್ರೀಡಾಕೂಟಗಳಿಂದ ವೇದಿಕೆ ದೊರೆತಂತಾಗುತ್ತದೆ. ಮೂರ್ನಾಡಿನ ಲಾಲು ಮುದ್ದಯ್ಯ ಕ್ರೀಡಾಂಗಣ ಜಿಲ್ಲೆಯಲ್ಲಿ ಉತ್ತಮ ಮೈದಾನವಾಗಿದೆ ಎಂದರು.

ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ ಹಾಗೂ ವನವಾಸಿ ಕಲ್ಯಾಣ ರಾಜ್ಯಾಧ್ಯಕ್ಷ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿ, ಹಿಂದೂಗಳನ್ನು ಒಗ್ಗೂಡಿಸಲು ಕ್ರೀಡಾಕೂಟ ನಡೆಯಬೇಕು. ಹಿಂದೂ ನಾಗರಿಕತೆಗೆ ತನ್ನದೇ ಆದ ಐತಿಹ್ಯ ಇದೆ. ಹಲವು ಸವಾಲಿನ ನಡುವೆ ಹಿಂದೂ ಸಂಸ್ಕೃತಿ ಉಳಿದಿದೆ. ಕೆಲವರು ಹಿಂದೂಗಳ ಧಮನಕ್ಕೆ ಷಡ್ಯಂತ್ರ ರೂಪಿಸುತ್ತಿದ್ದಾರೆ. ಬಹುಸಂಸ್ಕೃತಿಯ ದೇಶವಾಗಿರುವ ಭಾರತಕ್ಕೆ ಹಿಂದೂಗಳು ಜೀವವಾಗಿದ್ದಾರೆ. ಹಿಂದುತ್ವ, ಅಧ್ಯಾತ್ಮವನ್ನು ದುರ್ಬಲಗೊಳಿಸುತ್ತಿರುವ ಕೆಲಸವಾಗುತ್ತಿದೆ. ಆಧುನಿಕತೆಯ ಭರದಲ್ಲಿ ಸಂಸ್ಕೃತಿಯ ವಿನಾಶವಾಗುತ್ತಿರುವುದು ವಿಷಾದನೀಯ. ಯುವಸಮೂಹ ಶಕ್ತಿಶಾಲಿಯಾಗಿ ಸಂಸ್ಕೃತಿಯನ್ನು ಉಳಿಸಬೇಕು. ವೈಚಾರಿಕವಾಗಿ ಪ್ರಬುದ್ಧರಾಗಬೇಕು. ಜಾತಿಗಳ ನಡುವೆ ಒಗ್ಗಟ್ಟು ಮೂಡಿಸಿ ವೈಷಮ್ಯ ದೂರ ಮಾಡಬೇಕು ಎಂದು ಕರೆ ನೀಡಿದರು.

ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ಮಾತನಾಡಿದರು. ಹಾಕಿ ಕೂರ್ಗ್ ಪ್ರಧಾನ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ, ಟಾಟಾ ಕಾಫಿ ನಿವೃತ್ತ ಸಿಬ್ಬಂದಿ ಮೈದಾನ ನಿರ್ವಹಣೆಗಾರ ಹೆಚ್.ಎಂ. ರಾಜು, ಕ್ಲಬ್‌ನ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

ಕ್ಲಬ್ ಪ್ರಧಾನ ಕಾರ್ಯದರ್ಶಿ ಮುಕ್ಕಾಟೀರ ಕ್ಯಾರಿ ಕರುಂಬಯ್ಯ ಸ್ವಾಗತಿಸಿ, ಉಪನ್ಯಾಸಕಿ ಕಲ್ಪನಾ ಸಾಮ್ರಾಟ್ ನಿರೂಪಿಸಿ, ನಿರ್ದೇಶಕ ಕಂಬೀರAಡ ಗೌತಮ್ ವಂದಿಸಿದರು.

ಫಲಿತಾಂಶ : ಮೊದಲ ದಿನ ೪ ಪಂದ್ಯಾವಳಿಗಳು ನಡೆದವು. ಒಟ್ಟು ೫೦ ನಿಮಿಷಗಳ ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ನಡೆಯಿತು. ಮೊದಲ ಪಂದ್ಯಾಟ ದೇವಣಗೇರಿ ಹಾಗೂ ಮೈತಾಡಿ ನಡುವೆ ನಡೆದು ೧-೦ ಗೋಲುಗಳ ಅಂತರದಲ್ಲಿ ದೇವಣಗೇರಿ ಗೆಲುವು ಸಾಧಿಸಿತು. ತಂಡದ ಪರ ಶ್ಯಾನ್ ಮಾಚಯ್ಯ ೨೨ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು. ಚೇರಳ ಶ್ರೀಮಂಗಲ ವಿರುದ್ಧ ನೆಲಜಿ ತಂಡಕ್ಕೆ ೨-೦ ಗೋಲುಗಳ ಗೆಲುವು ದೊರೆಯಿತು. ನೆಲಜಿ ಪರ ೨ನೇ ನಿಮಿಷದಲ್ಲಿ ವಚನ್ ಕುಟ್ಟಪ್ಪ, ೧೭ನೇ ನಿಮಿಷದಲ್ಲಿ ಮೋನಿಷ ಕಾವೇರಪ್ಪ ಗೋಲು ಹೊಡೆದರು.

ಬಲ್ಲಮಾವಟಿ ಹಾಗೂ ಬಲಮುರಿ ನಡುವೆ ನಡೆದ ರೋಚಕ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ಪರ ೧೬ ನೇ ನಿಮಿಷದಲ್ಲಿ ನೆರವಂಡ ಪ್ರಶಾಂತ್, ಬಲಮುರಿ ಪರ ೪೧ನೇ ನಿಮಿಷದಲ್ಲಿ ಪಾಲಂದಿರ ಅಪ್ಪಚ್ಚು ೧-೧ ಗೋಲುಗಳನ್ನು ದಾಖಲಿಸಿದ ಪರಿಣಾಮ ಉಭಯ ತಂಡಗಳು ಸಮಬಲ ಸಾಧಿಸಿ ಸಡನ್‌ಡೆತ್ ಮೊರೆ ಹೋಗಲಾಯಿತು. ಇದರಲ್ಲಿ ೪-೫ ಅಂತರದಲ್ಲಿ ಬಲಮುರಿ ರೋಚಕ ಜಯ ತನ್ನದಾಗಿಸಿಕೊಂಡಿತು. ತರುಣ್ ೨, ಕೆಬ್ಬಟಿರ ಮುತ್ತಣ್ಣ, ಅಪ್ಪಚ್ಚು, ಜೀವನ್ ತಲಾ ೧ ಗೋಲು ದಾಖಲಿಸಿ ಗೆಲುವಿಗೆ ಕಾರಣಕರ್ತರಾದರು. ಬಲ್ಲಮಾವಟಿ ಪರ ಅಯ್ಯಪ್ಪ, ನಾಚಪ್ಪ, ಪೂವಣ್ಣ, ಪ್ರಶಾಂತ್ ತಲಾ ಒಂದೊAದು ಗೋಲು ಹೊಡೆದರು.

ಹಾಕತ್ತೂರು ವಿರುದ್ಧ ಕಾರ್ಮಾಡು ೬-೦ ಗೋಲುಗಳ ಭರ್ಜರಿ ಗೆಲುವು ಪಡೆಯಿತು. ಕಾರ್ಮಾಡು ಪರ ೭ನೇ ನಿಮಿಷದಲ್ಲಿ ನಾಣಯ್ಯ, ೧೧ನೇ ನಿಮಿಷದಲ್ಲಿ ಮುಖೇಶ್, ೧೩ನೇ ನಿಮಿಷದಲ್ಲಿ ಪ್ರಜ್ವಲ್, ೨೮ನೇ ನಿಮಿಷದಲ್ಲಿ ರಾಘವೇಂದ್ರ ತಲಾ ಒಂದು ಗೋಲು, ೩೦ ಹಾಗೂ ೩೬ನೇ ನಿಮಿಷದಲ್ಲಿ ಮ್ಯಾಕ್ ಮೊಣ್ಣಪ್ಪ ೨ ಗೋಲು ಗಳಿಸಿ ಎದುರಾಳಿ ತಂಡವನ್ನು ಗೋಲು ಗಳಿಸದಂತೆ ಕಟ್ಟಿಹಾಕಿತು.

ತಾಂತ್ರಿಕ ವಿಭಾಗ ಹಾಗೂ ತೀರ್ಪುಗಾರರಾಗಿ ಹಾಕಿ ಕೂರ್ಗ್ನ ಪಳಂಗಡ ಲವ ಕುಮಾರ್, ಪವನ್, ಗಣಪತಿ, ಅಪ್ಪಚ್ಚು, ದಿಲನ್, ಆಕಾಶ್, ಕುಶಾಲಪ್ಪ, ಲೋಕೇಶ್, ರೋಷನ್, ಅಪ್ಪಣ್ಣ, ಅಯ್ಯಪ್ಪ, ಜೆ.ಸಿ.ಬಿ. ವಿನೋದ್, ವೀಕ್ಷಣೆ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್ ಕಾರ್ಯನಿರ್ವಹಿಸಿದರು.