ಕಡಂಗ, ನ. ೨೨: ಇಲ್ಲಿನ ಅರಪಟ್ಟು ಗ್ರಾಮಸ್ಥರ ೪೩ನೇ ವರ್ಷದ ಕೈಲ್ ಪೊಳ್ದ್ ಕ್ರೀಡಾಕೂಟ ಕಡಂಗ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜ್ರಂಭಣೆ ಯಿಂದ ಆಚರಿಸಲಾಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ನೆರವೇರಿಸಿದರು.
ಕ್ರೀಡಾಕೂಟದ ಅಧ್ಯಕ್ಷ ನಡಿಕೇರಿಯಂಡ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಅರಪಟ್ಟು ಮತ್ತು ಕರಡ ಗ್ರಾಮದ ಯುವಕರು, ಹಿರಿಯರು, ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟಕ್ಕೆ ಹಾಜರಾಗಿ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದರು. ಕ್ರೀಡಾಕೂಟದಲ್ಲಿ ಹಾಕಿ, ಓಟ, ಹಗ್ಗಜಗ್ಗಾಟ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಯಿತು ಕ್ರೀಡೆಯಲ್ಲಿ ವಿಜೇತರಾದ ಸದಸ್ಯರುಗಳಿಗೆ ಪಾರಿತೋಷಕ ಮತ್ತು ನಗದು ನೀಡಿ ಗೌರವಿಸಲಾಯಿತು.