ಕೂಡಿಗೆ, ನ. ೨೦: ಸೋಮವಾರಪೇಟೆ ತಾಲೂಕು ಕರ್ನಾಟಕ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಆದಿವಾಸಿ ಕ್ರಾಂತಿಕಾರಿ ಬಿರ್ಸಾಮುಂಡಾ ಅವರ ೧೪೭ನೇ ಜಯಂತಿ ಆಚರಿಸಲಾಯಿತು. ವೇದಿಕೆಯ ತಾಲೂಕು ಅಧ್ಯಕ್ಷ ಜೆ.ಕೆ. ರಾಜು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯ ನಿರ್ದೇಶಕ ಬಿ.ಕೆ. ಮೋಹನ್, ಗಿರಿಜನ ಮುಖಂಡ ಡಿ.ಆರ್. ಪ್ರಭಾಕರ್ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ವೇದಿಕೆ ಪ್ರಮುಖರಾದ ಜೆ.ಕೆ. ಪ್ರಕಾಶ್, ಕೆ.ಆರ್. ರವಿ, ಸ್ವಾಮಿ, ಗಿರಿಜನ ಮುಖಂಡ ಡಿ.ಆರ್ .ಪ್ರಭಾಕರ್, ಆದಿವಾಸಿ ಮುಖಂಡ ನಾಗಣ್ಣ, ಈರಣ್ಣ ಸುಬ್ರಮಣಿ, ಧರ್ಮಪ್ಪ, ಭರಮಣ್ಣ ಮತ್ತಿತರರು ಇದ್ದರು.