ಮಡಿಕೇರಿ, ನ. ೨೦: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ನಗರದ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದ ಶತಮಾನ ಭವನದಲ್ಲಿ ಯೋಗ ಶಿಬಿರ ನಡೆಯಿತು.

ಶೃಂಗೇರಿ ಶಾರದಾ ಪೀಠದ ನಿಯೋಜಿತ ಶ್ರೀ ಶಂಕರನಾರಾಯಣ ಶಾಸ್ತಿç ಯೋಗದ ಕುರಿತು ವಿವರಿಸಿ, ಅಭ್ಯಾಸ ವರ್ಗ ನಡೆಸಿಕೊಟ್ಟರು. ಯೋಗ, ಪ್ರಾಣಾಯಾಮ, ಯೌಗಿಕ, ಆಹಾರ ಮತ್ತು ದಿವ್ಯ ಜೀವನದ ಬಗೆಗಿನ ಮಹತ್ವದ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ಒದಗಿಸಿದರು.

ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧ ಗಂಟೆಯ ತನಕ ಶಿಬಿರಾರ್ಥಿಗಳು ಯೋಗದಲ್ಲಿ ತೊಡಗಿಸಿಕೊಂಡರು.