ಭಾಗಮಂಡಲ, ನ. ೨೦: ತುಲಾಸಂಕ್ರಮಣದ ಪ್ರಯುಕ್ತ ತಲಕಾವೇರಿಗೆ ಕೊಂಡೊಯ್ಯಲಾಗಿದ್ದ ಚಿನ್ನಾಭರಣಗಳನ್ನು ಭಾಗಮಂಡಲಕ್ಕೆ ತರಲಾಯಿತು. ಕಳೆದ ಅಕ್ಟೋಬರ್ ೧೬ರಂದು ಭಾಗಮಂಡಲದಿAದ ತಕ್ಕರಾದ ಕೋಡಿ ಮೋಟಯ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅವರಿಂದ ಆಭರಣಗಳನ್ನು ಪಡೆದು ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ತೊಡಿಸಲಾಗಿತ್ತು. ಕಿರುಸಂಕ್ರಮಣದವರೆಗೆ ಕಾವೇರಿ ಕುಂಡಿಕೆಗೆ ಆಭರಣ ಹಾಗೂ ಬೆಳ್ಳಿಯ ಕವಚಗಳನ್ನು ತೊಡಿಸಲಾಗಿತ್ತು.
ತುಲಾಸಂಕ್ರಮಣ ಮುಗಿದ ಹಿನ್ನೆಲೆಯಲ್ಲಿ ಚಿನ್ನಾಭರಣಗಳನ್ನು ಮರಳಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಅವರಿಗೆ ಹಸ್ತಾಂತರಿಸ ಲಾಯಿತು . ನಿನ್ನೆ ದಿನ ಹುಂಡಿ ಎಣಿಕೆ ಮಾಡಲಾಗಿದ್ದು, ಅಕ್ಟೋಬರ್ ೨೮ರಿಂದ ನವಂಬರ್ ೧೭ ರವರೆಗೆ ಕ್ಯೂ ಆರ್ ಕೋಡ್ ಹುಂಡಿಯಲ್ಲಿ ೫೨,೯೧೭ ರೂಪಾಯಿ ಸಂಗ್ರಹವಾಗಿದೆ. ತಲಕಾವೇರಿ ಮತ್ತು ಭಾಗಮಂಡಲ ಎರಡೂ ಕ್ಷೇತ್ರಗಳಲ್ಲಿ ರೂ.೧೦ ಲಕ್ಷದ ೩೭೨ ಸೇರಿ ಒಟ್ಟು ರೂ. ೧೦ ಲಕ್ಷದ ೬೩೨೮೯ ಸಂಗ್ರಹವಾಗಿದೆ.
ಭಾಗಮAಡಲದಲ್ಲಿ ಒಂದು ತಿಂಗಳ ಕಾಲ ಉರಿಯುತ್ತಿದ್ದ ನಂದಾದೀಪವನ್ನು ಹಾಗೂ ಅಕ್ಷಯ ಪಾತ್ರೆಯನ್ನು ತೆಗೆಯುವ ಮೂಲಕ ಕಾವೇರಿ ಜಾತ್ರೆ ಸಂಪನ್ನಗೊAಡಿತು.
- ಸುನಿಲ್