ಸೋಮವಾರಪೇಟೆ, ನ. ೨೧: ಕಾಫಿ ಸೇರಿದಂತೆ ಇನ್ನಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪಟ್ಟಣದ ಯುವ ಉದ್ಯಮಿಯೋರ್ವರು ತಮ್ಮ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

ಮೂಲತಃ ಬೆಟ್ಟದಕೊಪ್ಪ ನಿವಾಸಿ, ತಾಕೇರಿ ಗ್ರಾಮದಲ್ಲಿ ನೆಲೆಸಿದ್ದ ಕಾವೇರಿ ಈರಪ್ಪ ದಂಪತಿ ಪುತ್ರ ಶಶಿಕುಮಾರ್ (೩೬) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಪಟ್ಟಣದಲ್ಲಿ ಕಳೆದ ಕೆಲ ವರ್ಷಗಳಿಂದ ಕಾಫಿ ಸೇರಿದಂತೆ ಇನ್ನಿತರ ಕೃಷಿಗೆ ಪೂರಕವಾದ ಉದ್ಯಮವನ್ನು ನಡೆಸುತ್ತಿದ್ದ ಶಶಿಕುಮಾರ್ ಅವರು ಇಂದು ಬೆಳಿಗ್ಗೆ ಬೆಟ್ಟದಕೊಪ್ಪದಲ್ಲಿರುವ ತಮ್ಮ ಕಾಫಿ ತೋಟದಲ್ಲಿ ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇತ್ತೀಚೆಗಷ್ಟೇ ಸ್ವಂತವಾಗಿ ಉದ್ಯಮ ಸ್ಥಾಪಿಸಿದ್ದ ಶಶಿಕುಮಾರ್, ಕಳೆದ ಕೆಲ ತಿಂಗಳ ಹಿಂದಷ್ಟೇ ಹಾನಗಲ್ಲು ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ತನ್ನ ತಾಯಿ ಯೊಂದಿಗೆ ವಾಸವಿ ದ್ದರು. ನಿನ್ನೆ ರಾತ್ರಿ ೧೧ ಗಂಟೆಯ ವರೆಗೂ ಪಟ್ಟಣದಲ್ಲಿದ್ದ ಅವರು, ರಾತ್ರಿ ಮನೆಗೆ ತೆರಳದೇ ಬೆಟ್ಟದಕೊಪ್ಪದಲ್ಲಿರುವ ತೋಟದ ಮನೆಗೆ ಹೋಗಿದ್ದಾರೆ.

ಇಂದು ಬೆಳಿಗ್ಗೆ ೯.೧೫ರವರೆಗೆ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದ ಅವರು, ನಂತರ ಯಾರ ಕರೆಯನ್ನೂ ಸ್ವೀಕರಿಸಿಲ್ಲ. ಇದರಿಂದ ಅನುಮಾನ ಗೊಂಡ ಸ್ನೇಹಿತರು ಬೆಟ್ಟದಕೊಪ್ಪಕ್ಕೆ ತೆರಳಿದ ಸಂದರ್ಭ ನೈಲಾನ್ ಹಗ್ಗದಿಂದ ಮರಕ್ಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವುದು ಕಂಡುಬAದಿದೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸ ಲಾಯಿತು. ಅವಿವಾಹಿತರಾಗಿದ್ದ ಶಶಿಕುಮಾರ್ ಅವರು ತಾಯಿಯನ್ನು ಅಗಲಿದ್ದಾರೆ. ಶಶಿಕುಮಾರ್ ಸಣ್ಣವರಿದ್ದಾಗಲೇ ಪತಿಯನ್ನು ಕಳೆದುಕೊಂಡ ಕಾವೇರಿ ಅವರು, ಇದೀಗ ಇದ್ದ ಓರ್ವ ಮಗನನ್ನೂ ಕಳೆದು ಕೊಂಡಿದ್ದು, ಮಾತೃ ಹೃದಯದ ರೋಧನೆ ಎಲ್ಲರ ಮನಕಲಕುವಂತೆ ಮಾಡಿತ್ತು.

ವ್ಯವಹಾರದಲ್ಲಿನ ನಷ್ಟ ಕಾರಣ?: ಆತ್ಮಹತ್ಯೆಗೆ ವ್ಯವಹಾರದಲ್ಲಿನ ನಷ್ಟವೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಶಶಿಕುಮಾರ್ ಅವರು ಪಟ್ಟಣ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಕೃಷಿಕರ ಕರಿಮೆಣಸನ್ನು ಖರೀದಿಸಿದ್ದು, ಇದನ್ನು ಪಟ್ಟಣ ಸಮೀಪದ ಗ್ರಾಮವೊಂದರ ಮಧ್ಯವರ್ತಿಯೋರ್ವನಿಗೆ ನೀಡಿದ್ದರು. ಶಶಿಕುಮಾರ್ ಅವರಿಂದ ಮೆಣಸು ಖರೀದಿಸಿದ ಮಧ್ಯವರ್ತಿ, ಇವರಿಗೆ ಹಣ ನೀಡದೇ ಸತಾಯಿಸುತ್ತಿದ್ದ ಎನ್ನಲಾಗಿದೆ.

‘ಕಳೆದ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿಗೆ ತೆರಳಿ ಮಧ್ಯವರ್ತಿಯನ್ನು ಭೇಟಿ ಮಾಡಿ ಹಣ ಸಂದಾಯ ಮಾಡುವಂತೆ ತಾಕೀತು ಮಾಡಿ ಬಂದಿದ್ದರು. ಈ ಮಧ್ಯೆ ತಮ್ಮ ಅಂಗಡಿಗೆ ಬರುತ್ತಿದ್ದ ಗ್ರಾಹಕರು ಹಣವನ್ನು ಕೇಳುತ್ತಿದ್ದುದರಿಂದ ಮಾನಸಿಕವಾಗಿಯೂ ಕುಗ್ಗಿಹೋಗಿ ದ್ದರು. ವ್ಯವಹಾರ ನಷ್ಟದ ಬಗ್ಗೆಯೇ ಮಾತನಾಡುತ್ತಿದ್ದರು. ಸುಮಾರು ೩೭ ಲಕ್ಷದಷ್ಟು ಹಣ ಬರಬೇಕಿದ್ದು, ವ್ಯವಹಾರ ನಡೆಸುವುದೇ ಕಷ್ಟವಾಗಿದೆ’ ಎಂದು ಆಗಾಗ್ಗೆ ಹೇಳುತ್ತಿದ್ದರು ಎಂದು ಶಶಿಕುಮಾರ್ ಅವರ ಸ್ನೇಹಿತರು ತಿಳಿಸಿದ್ದಾರೆ.