ವೀರಾಜಪೇಟೆ, ನ. ೨೦: ಕಳೆದ ನಾಲ್ಕು ದಿನಗಳಿಂದ ವೀರಾಜಪೇಟೆಯ ಬಾಳುಗೋಡಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿದ್ದ ಕೊಡವ ನಮ್ಮೆ ಸಂಪನ್ನಗೊAಡಿದ್ದು, ಹಾಕಿಯಲ್ಲಿ ಮೂರ್ನಾಡು ಕೊಡವ ಸಮಾಜ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಡಿಕೇರಿ ಕೊಡವ ಸಮಾಜ ಮತ್ತು ಮೂರ್ನಾಡು ಕೊಡವ ಸಮಾಜದ ನಡುವೆ ನಡೆದ ರೋಚಕ ಹಾಕಿ ಪಂದ್ಯದಲ್ಲಿ ೧-೦ ಗೋಲಿನಿಂದ ಮೂರ್ನಾಡು ಕೊಡವ ಸಮಾಜ ಜಯ ಸಾಧಿಸಿತು. ವಿಜೇತ ತಂಡಕ್ಕೆ ರೂ. ೩೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೨೦,೦೦೦ ನಗದು ಹಾಗೂ ಟ್ರೋಪಿಯನ್ನು ನೀಡಲಾಯಿತು.

“ಕೊಡವ ನಮ್ಮೆ”ಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ೯ ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಮೈಸೂರು ಕೊಡವ ಸಮಾಜ ೬ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದು ದ್ವಿತೀಯ ಸ್ಥಾನ ಹಾಗೂ ಮಡಿಕೇರಿ, ನಾಪೋಕ್ಲು ಮತ್ತು ಪೊನ್ನಂಪೇಟೆ ಕೊಡವ ಸಮಾಜಗಳು ತಲಾ ಎರಡು ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದು ತೃತೀಯ ಸ್ಥಾನ ಗಳಿಸಿದವು.

ಹಗ್ಗಜಗ್ಗಾಟದ ರೋಚಕ ಪಂದ್ಯಾವಳಿಯಲ್ಲಿ ಪುರುಷರ ವಿಭಾಗ ದಲ್ಲಿ ಅಮ್ಮತ್ತಿ ಕೊಡವ ಸಮಾಜದ ವಿರುದ್ಧ ನಾಪೋಕ್ಲು ಕೊಡವ ಸಮಾಜ ಹಾಗೂ ಮಹಿಳೆಯರ ವಿಭಾಗದಲ್ಲಿ ಮಡಿಕೇರಿ ಕೊಡವ ಸಮಾಜದ ವಿರುದ್ಧ ನಾಪೋಕ್ಲು

(ಮೊದಲ ಪುಟದಿಂದ) ಕೊಡವ ಸಮಾಜ ಗೆಲುವು ದಾಖಲಿಸಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕೊಡವರು ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ ತಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣ ತೊಡಬೇಕೆಂದು ಕರೆ ನೀಡಿದರು.

ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಮಾತನಾಡಿ ಸರ್ಕಾರ ನೀಡಿರುವ ರೂ.೧೦ ಕೋಟಿ ಅನುದಾನ ದಲ್ಲಿ ೬ ಕೋಟಿ ಬಾಳುಗೋಡು ಕೊಡವ ಸಮಾಜ, ೩ ಕೋಟಿ ೩೧ ಕೊಡವ ಸಮಾಜಗಳಿಗೆ ಮತ್ತು ೧ ಕೋಟಿ ರೂ. ಭಾಗಮಂಡಲದ ಕೊಡವ ಸಮುದಾಯ ಭವನಕ್ಕೆ ಹಂಚಿಕೆಯಾಗಲಿದೆ ಎಂದು ತಿಳಿಸಿದರು.

ಸ್ವಾಭಿಮಾನಿ ಕೊಡವರು ಒಗ್ಗಟ್ಟನ್ನು ಪ್ರದರ್ಶಿಸುವ ಅಗತ್ಯವಿದೆ. ಸರ್ಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕೊಡವ ಸಮುದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಸಲಹೆ ನೀಡಿದರು.

ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ಕೊಡವ ನಮ್ಮೆಯಂತಹ ಕಾರ್ಯಕ್ರಮಗಳು ನಡೆಯುವಾಗ ಪ್ರತಿಯೊಬ್ಬ ಕೊಡವನು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಎಲ್ಲಾ ೩೪ ಕೊಡವ ಸಮಾಜಗಳು ಹಾಗೂ ದಾನಿಗಳ ಸಹಕಾರದಿಂದ ನಾಲ್ಕು ದಿನಗಳ “ಕೊಡವ ನಮ್ಮೆ” ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ಇದೇ ರೀತಿಯ ಒಗ್ಗಟ್ಟು ಮತ್ತು ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.

ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕ್ರೀಡಾ ಸಮಿತಿಯ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಆಹಾರ ಸಮಿತಿಯ ಅಧ್ಯಕ್ಷ ಕುಂಬೇರ ಮನುಕುಮಾರ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಒಕ್ಕೂಟದ ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಉಪಾಧ್ಯಕ್ಷರುಗಳಾದ ಮಾಳೇಟಿರ ಅಭಿಮನ್ಯು ಕುಮಾರ್, ಕರವಟ್ಟಿರ ಪೆಮ್ಮಯ್ಯ, ಮಲಚಿರ ಬೋಸ್ ಚಿಟ್ಟಿಯಪ್ಪ, ಬೊಳ್ಳಜಿರ ಅಯ್ಯಪ್ಪ, ಕೊಡವ ಸಮಾಜ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ ಉಪಸ್ಥಿತರಿದ್ದರು.

ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ವಾಟೇರಿರ ಶಂಕರಿ ಪೂವಯ್ಯ ಸ್ವಾಗತಿಸಿ, ಮಾಳೇಟಿರ ಶ್ರೀನಿವಾಸ್ ಹಾಗೂ ಚೆಪ್ಪುಡಿರ ಕಾರ್ಯಪ್ಪ ನಿರೂಪಿಸಿದರು.

ಸ್ಪರ್ಧಾ ವಿಜೇತರು: ಉಮ್ಮತ್ತಾಟ್ ಸ್ಪರ್ಧೆಯಲ್ಲಿ ಮಡಿಕೇರಿ ಕೊಡವ ಸಮಾಜ ಪ್ರಥಮ, ಮೈಸೂರು ಕೊಡವ ಸಮಾಜ ದ್ವಿತೀಯ ಹಾಗೂ ಬೆಂಗಳೂರು ಕೊಡವ ಸಮಾಜ ತೃತೀಯ ಬಹುಮಾನ ಪಡೆದುಕೊಂಡಿತು.

ಕೋಲಾಟ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಪ್ರಥಮ, ಮಡಿಕೇರಿ ಕೊಡವ ಸಮಾಜ ದ್ವಿತೀಯ ಹಾಗೂ ವೀರಾಜಪೇಟೆ ಕೊಡವ ಸಮಾಜ ತೃತೀಯ ಬಹುಮಾನ ಗಳಿಸಿತು.

ಬೊಳಕಾಟ್ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಪ್ರಥಮ, ಮೈಸೂರು ಕೊಡವ ಸಮಾಜ ದ್ವಿತೀಯ ಹಾಗೂ ನಾಪೋಕ್ಲು ಕೊಡವ ಸಮಾಜ ತೃತೀಯ ಸ್ಥಾನ ಪಡೆಯಿತು.

ಕತ್ತಿಯಾಟ್ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಪ್ರಥಮ, ಮೈಸೂರು ಕೊಡವ ಸಮಾಜ ದ್ವಿತೀಯ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ತೃತೀಯ, ಬಾಳೋಪಾಟ್ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಪ್ರಥಮ, ಮೂರ್ನಾಡು ಕೊಡವ ಸಮಾಜ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಮಕ್ಕಂದೂರು ಕೊಡವ ಸಮಾಜ ಪಡೆದುಕೊಂಡಿತು.

ತಾಲಿಪಾಟ್ ಸ್ಪರ್ಧೆಯಲ್ಲಿ ವೀರಾಜಪೇಟೆ ಕೊಡವ ಸಮಾಜ ಪ್ರಥಮ, ಬೆಂಗಳೂರು ಕೊಡವ ಸಮಾಜ ದ್ವಿತೀಯ ಹಾಗೂ ಮೈಸೂರು ಕೊಡವ ಸಮಾಜ ತೃತೀಯ ಬಹುಮಾನ ಪಡೆದುಕೊಂಡಿತು.

ಸಮ್ಮAದ ಅಡಕವೊ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಪ್ರಥಮ, ಮೈಸೂರು ಕೊಡವ ಸಮಾಜ ದ್ವಿತೀಯ ಹಾಗೂ ಚೆಯ್ಯಂಡಾಣೆ ಕೊಡವ ಸಮಾಜ ತೃತೀಯ ಬಹುಮಾನ ಗಳಿಸಿತು.

ಪರಿಯಕಳಿ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಪ್ರಥಮ, ನಾಪೋಕ್ಲು ಕೊಡವ ಸಮಾಜ ದ್ವಿತೀಯ ಹಾಗೂ ಶ್ರೀಮಂಗಲ ಕೊಡವ ಸಮಾಜ ತೃತೀಯ ಬಹುಮಾನ ಪಡೆಯಿತು.

ಕಪ್ಪೆಯಾಟ್ ಸ್ಪರ್ಧೆಯಲ್ಲಿ ಬಿರುನಾಣಿ ಕೊಡವ ಸಮಾಜದ ಕರ್ತಮಾಡ ಅಯ್ಯಪ್ಪ, ಪೊನ್ನಂಪೇಟೆ ಕೊಡವ ಸಮಾಜದ ನೆಲ್ಲಮಾಡ ಸಿದ್ದಾರ್ಥ ಹಾಗೂ ಬೆಂಗಳೂರು ಕೊಡವ ಸಮಾಜದ ತಂಬುಕುತ್ತಿರ ಆಕಾಶ್ ಪ್ರಥಮ ಬಹುಮಾನ ಪಡೆದುಕೊಂಡರು.