ಮಡಿಕೇರಿ, ನ. ೨೧: ಅರೆಸೇನಾ ಪಡೆಯ ಮಾಜಿ ಯೋಧರ ಸಮಸ್ಯೆಗಳ ಬಗ್ಗೆ, ಕುಂದುಕೊರತೆಗಳ ಸಂಬAಧ ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರಕಾರ ಯಾವುದೇ ರೀತಿ ಗಮನಹರಿಸುತ್ತಿಲ್ಲ. ಅರೆಸೇನಾ ಪಡೆಯವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಕೊಡಗು ಜಿಲ್ಲಾ ಅರೆಸೇನಾ ಪಡೆ ಮಾಜಿ ಯೋಧರ ಒಕ್ಕೂಟದ ಪ್ರಮುಖರು ಆಗ್ರಹಿಸಿದರು.
ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಒಕ್ಕೂಟದ ಸದಸ್ಯರು, ಒಕ್ಕೂಟದ ಕಚೇರಿ ಹಾಗೂ ಕ್ಯಾಂಟೀನ್ ವ್ಯವಸ್ಥೆಗಾಗಿ ಕರ್ಣಂಗೇರಿ ಗ್ರಾಮದ ಸ.ನಂ. ೧೦/೨ರ ೦.೨೦ ಎಕ್ರೆ ಜಾಗವನ್ನು ಸರಕಾರದಿಂದ ಎರಡು ಬಾರಿ ಸರ್ವೆ ಮಾಡಿಸಿ ಇದುವರೆಗೂ ಮಂಜೂರು ಮಾಡದೆ ನಿರ್ಲಕ್ಷö್ಯ ವಹಿಸಲಾಗಿದೆ. ಹಾಸನದಲ್ಲಿ ೧೫೦ ಸದಸ್ಯರ ಅರೆ ಸೇನಾ ಪಡೆಯ ಮಾಜಿ ಯೋಧರ ಸಂಫಕ್ಕೆ
ಅಲ್ಲಿನ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಜಾಗ ಮಂಜೂರು ಮಾಡಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕೊಡಗಿನಲ್ಲಿ ಮಾತ್ರ ಅರೆಸೇನಾ ಪಡೆಯವರನ್ನು ನಿರ್ಲಕ್ಷö್ಯಕ್ಕೆ ಒಳಪಡಿಸಲಾಗಿದೆ. ಇದರಿಂದ ನಾವುಗಳು ಕ್ಯಾಂಟೀನ್, ಆಸ್ಪತ್ರೆ ಹಾಗೂ ಇತರ ಸೇವೆಗಳಿಂದ ವಂಚಿತರಾಗಿದ್ದೇವೆ ಎಂದು ವಿಷಾದಿಸಿದರು. ಇದಲ್ಲದೆ ವಸತಿ, ನಿವೇಶನ ಹಾಗೂ ಜಮೀನು ಮಂಜೂರಾತಿಗೂ ಹಲವು ಮಾಜಿ ಯೋಧರು ಅರ್ಜಿ ಸಲ್ಲಿಸಿದ್ದು, ಈ ಸಂಬAಧವೂ ಯಾವುದೇ ಪ್ರಗತಿ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ)
ಡಿ.೧೩ ರಂದು ‘ಬೆಂಗಳೂರು ಚಲೋ’
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು ಅರೆಸೇನಾ ಪಡೆಯ ಯೋಧರ ಹಾಗೂ ಮಾಜಿ ಯೋಧರ ಬಗ್ಗೆ ಭೇದಭಾವ, ತಾರತಮ್ಯ ತೋರಿ ನಿರ್ಲಕ್ಷö್ಯ ವಹಿಸಿರುವ ಸಂಬAಧ ಡಿ.೧೩ ರಂದು ‘ಬೆಂಗಳೂರು ಚಲೋ ಮತ್ತು ಸಾಂಕೇತಿಕ ಧರಣಿ, ಹುತಾತ್ಮ ಯೋಧರ ಶ್ರದ್ಧಾಂಜಲಿ’ಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಅರೆಸೇನಾ ಸಂಘಟನೆ ಹಮ್ಮಿಕೊಂಡಿದೆ. ೨೦೦೧ರ ಡಿಸೆಂಬರ್ ೧ ರಂದು ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದನಾ ದಾಳಿ ಸಂದರ್ಭ ಸಂಸತ್ ಸದಸ್ಯರನ್ನು ರಕ್ಷಿಸುವ ಕಾರ್ಯದಲ್ಲಿ ಅರೆಸೇನಾ ಪಡೆಯ ಅನೇಕ ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾದರು. ಈ ನೆನಪಿನಲ್ಲಿ ಅದೇ ದಿನ ಬೆಂಗಳೂರು ಚಲೋ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಮೂಲಕ ಅರೆಸೇನಾ ಪಡೆಯ ಸದಸ್ಯರ ಬೇಡಿಕೆಗಳ ಈಡೇರಿಕೆಗೆ ಸರಕಾರದ ಗಮನ ಸೆಳೆಯಲಾಗುವುದು. ಇದೇ ಸಂದರ್ಭ ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿರುವ ಸುಮಾರು ೩೮,೦೦೦ ಅರೆಸೇನಾ ಪಡೆಯ ಯೋಧರಿಗೆ ಶ್ರದ್ಧಾಂಜಲಿ ಕೂಡ ಅರ್ಪಿಸಲಾಗುವುದಾಗಿ ಮಾಹಿತಿ ನೀಡಿದರು.
ತಾ.೨೫ ರಂದು ಮಹಾಸಭೆ
ತಾ.೨೫ ರಂದು ಅರೆಸೇನಾ ಪಡೆ ಮಾಜಿ ಯೋಧರ ಒಕ್ಕೂಟದ ವಾರ್ಷಿಕ ಮಹಾಸಭೆ ಮಡಿಕೇರಿಯ ಮೈತ್ರಿ ಕಟ್ಟಡದ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಸದಸ್ಯರು ಮಾಹಿತಿ ನೀಡಿದರು. ವಾರ್ಷಿಕ ಸಭೆಯಲ್ಲಿ ಅರೆ ಸೇನಾ ಪಡೆಯ ಮಾಜಿ ಯೋಧರು, ಸೇವಾನಿರತ ಕುಟುಂಬದ ಅವಲಂಬಿತ ಸದಸ್ಯರು ಭಾಗವಹಿಸುವಂತೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಎಸ್ ಆನಂದ ಸಿ.ಆರ್.ಪಿ.ಎಫ್ (ನಿ), ಕಾರ್ಯದರ್ಶಿ ನೂರೇರ ಎಂ ಭೀಮಯ್ಯ ಬಿ.ಎಸ್.ಎಫ್ (ನಿ), ಸಿ.ಜಿ ಸಿದ್ದಾರ್ಥ ಬಿ.ಎಸ್.ಎಫ್ (ನಿ), ಅಂಜಪರವAಡ ಟಿ.ಉತ್ತಯ್ಯ ಸಿ.ಐ.ಎಸ್.ಎಫ್ (ನಿ) ಅವರುಗಳು ಉಪಸ್ಥಿತರಿದ್ದರು.