ಸುಂಟಿಕೊಪ್ಪ, ನ. ೨೦: ಗೌಡಸಂಘ ಸುಂಟಿಕೊಪ್ಪ ನಾಡು ಗೌಡ ಸಮಾಜ ಬಾಂಧವರು ಒಟ್ಟಾಗಿ ಎಲ್ಲರ ಸಹಕಾರದಿಂದ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕೆಂದು ಗೌಡ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಕರೆ ನೀಡಿದರು.

ಗೌಡಸಂಘ ಸುಂಟಿಕೊಪ್ಪ ನಾಡು ಇದರ ೭ನೇ ವರ್ಷದ ವಾರ್ಷಿಕ ಸಭೆಯು ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೌಡ ಸಂಘದಲ್ಲಿ ೮೦೦ಕ್ಕೂ ಹೆಚ್ಚು ಸದಸ್ಯರಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ಸದಸ್ಯರು ನೆರವು ನೀಡಬೇಕೆಂದರು. ಸಂಘದ ಸದಸ್ಯ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ. ಭಾರತೀಶ್ ಮಾತನಾಡಿ ಗೌಡ ಜನಾಂಗದ ಹೆಚ್ಚಿನವರು ಕೃಷಿಕರಾಗಿದ್ದು, ಇರುವ ಭೂಮಿಯನ್ನು ಮಾರಾಟ ಮಾಡದೆ ಉಳಿಸಿಕೊಳ್ಳಬೇಕೆಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿಳಿಯಾರು ಮಂಜು, ಕಾರ್ಯದರ್ಶಿ ಕೌಶಿಕ್, ಸಹ ಕಾರ್ಯದರ್ಶಿ ಮಾಗಿಲು ವಸಂತ, ಖಜಾಂಚಿ ಪಟ್ಟೆಮನೆ ಉದಯ, ನಿರ್ದೇಶಕರಾದ ಪಟ್ಟೆಮನೆ ಕುಸುಮಾ ಸದಾಶಿವ, ಕಡ್ಲೆಮನೆ ರತಿರಘು, ಕಡ್ಯದ ಅರುಣ್ ಕುಮಾರ್, ಓಡಿಯಪ್ಪನ ಸುದೀಶ್, ಮಟ್ರಮಾಡ ಪಿ.ಸೋಮಯ್ಯ, ಪಟ್ಟೆಮನೆ ಪ್ರಸನ್ನ, ಪಿ. ರುಕ್ಮಯ್ಯ, ಬೈಚನ ಮೋಹನ್ ಕುಮಾರ್, ಮಲ್ಲನ ಸತೀಶ್, ಬಿ. ತಿಮ್ಮಯ್ಯ, ಕುಂಜಿಲನ ಮಂಜುನಾಥ, ಕೃಪಾಶೇಖರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯಮಟ್ಟದ ಆಟೋಟ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.