ಕಣಿವೆ, ನ. ೧೯: ಕುಶಾಲನಗರ ತಾಲೂಕಿನ ಹಿರಿಯ ಸಹಕಾರಿ ಎಂ.ಎನ್. ಕುಮಾರಪ್ಪ ಹಾಗೂ ಮಡಿಕೇರಿಯ ಎಂ.ಪಿ. ಮುತ್ತಪ್ಪ ಅವರುಗಳಿಗೆ ರಾಜ್ಯ ಸರ್ಕಾರದ ಸಹಕಾರ ಇಲಾಖೆಯಿಂದ ಕೊಡಮಾಡುವ ಈ ಬಾರಿಯ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಲಭಿಸಿದೆ. ತಾ. ೨೦ ರಂದು (ಇಂದು) ಮೈಸೂರಿನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.