ಚೆಂಬು, ನ. ೧೯: ಇಲ್ಲಿನ ಶ್ರೀ ಭಗವಾನ್ ಸಂಘದಿAದ ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನಾಚರಣೆಯಂದು ನೆಹರು ಯುವ ಕೇಂದ್ರ ಸಂಘಟನೆಯ ಸಂಸ್ಥಾಪನಾ ದಿನಾಚರಣೆಯನ್ನು ಬಾಲಂಬಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಎಪಿಎಂಸಿ ಉಪಾಧ್ಯಕ್ಷ ಅನಂತ್ ಊರುಬೈಲು ಮಾತನಾಡಿ, ದೇಶದಾದ್ಯಂತ ವಿಸ್ತರಿಸಿರುವ ನೆಹರು ಯುವ ಕೇಂದ್ರ ಸಂಘಟನೆಯು ದೇಶದ ಯುವಶಕ್ತಿಯ ಪ್ರತೀಕವಾಗಿದ್ದು, ಯುವ ಶಕ್ತಿಯು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಕ ಮತ್ತು ಪ್ರೋತ್ಸಾಹಿಸುವ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯತೀಶ್ ಹನಿಯಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೊಸೈಟಿ ವಿಸ್ತರಿಸಿರುವ ನೆಹರು ಯುವ ಕೇಂದ್ರ ಸಂಘಟನೆಯು ದೇಶದ ಯುವಶಕ್ತಿಯ ಪ್ರತೀಕವಾಗಿದ್ದು, ಯುವ ಶಕ್ತಿಯು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಕ ಮತ್ತು ಪ್ರೋತ್ಸಾಹಿಸುವ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯತೀಶ್ ಹನಿಯಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೊಸೈಟಿ ನಿರ್ದೇಶಕ ದಿನೇಶ್ ಸಣ್ಣಮನೆ, ಗ್ರಾ.ಪಂ ಮಾಜಿ ಅಧ್ಯಕ್ಷ ಆದಂ ಸೆಂಟ್ಯಾರ್, ಅಟಲ್ ಜಿ ಜನಸ್ನೇಹಿ ಕೇಂದ್ರದ ರೋಹಿತ್ ಹೊಸೂರು ಭಾಗವಹಿಸಿದ್ದರು. ರವಿರಾಜ ಹೊಸೂರು ಕಾರ್ಯಕ್ರಮ ನಿರೂಪಿಸಿದರು. ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು ಮತ್ತು ಸಸಿಗಳನ್ನು ನೆಡಲಾಯಿತು.