ಮೋದಿ ಅವರ ಸ್ವತಂತ್ರ ಕೆಲಸಗಳನ್ನು ಆರ್ಎಸ್ಎಸ್ ನಿಯಂತ್ರಿಸುವುದಿಲ್ಲ: ಭಾಗವತ್
ಜಬಲಪುರ್(ಮಧ್ಯಪ್ರದೇಶ), ನ. ೨೦: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟಿçÃಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ಸ್ವಯಂ ಸೇವಕರಾಗಿದ್ದರೂ, ಅವರ ಸ್ವತಂತ್ರ ಕೆಲಸಗಳನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ಇಲ್ಲಿನ ಸ್ಥಳೀಯ ಸಮುದಾಯದ ಪ್ರಮುಖರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಭಾಗವತ್ ಅವರು, ಸಂಘದ ಹೆಸರು ಬಂದಾಗ, ಜನ ಮೋದಿ ಜಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಮೋದಿ ಜಿ ನಮ್ಮ `ಸ್ವಯಂಸೇವಕ' ಅಷ್ಟೇ. ಸ್ವತಂತ್ರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ತಿಳಿಸಿದರು. ಯಾರಾದರೂ ಆರ್ಎಸ್ಎಸ್ ಬಗ್ಗೆ ಮಾತನಾಡುವಾಗ ಜನ ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಬಗ್ಗೆಯೂ ಯೋಚಿಸುತ್ತಾರೆ. ಆ ಸಂಘಟನೆಯಲ್ಲಿಯೂ ನಮ್ಮ ಸ್ವಯಂಸೇವಕರು ಇದ್ದಾರೆ ಮತ್ತು ಅವರ ಚಿಂತನೆಯೂ ಇದೇ ಆಗಿದೆ ಎಂದು ಅವರು ಹೇಳಿದರು. ಆದರೆ ಇವೆಲ್ಲವೂ ಸಂಘವಲ್ಲ. ಅವರು ತಮ್ಮದೇ ಆದ ಕೆಲಸವನ್ನು ಮಾಡುತ್ತಿದ್ದಾರೆ. ಸಂಘ ಸಹ ತನ್ನದೇ ಆದ ಸ್ವತಂತ್ರ ಕೆಲಸವನ್ನು ಮಾಡುತ್ತಿದೆ ಎಂದು ಭಾಗವತ್ ಸ್ಪಷ್ಟಪಡಿಸಿದರು.
ಮಂಗಳೂರು ಆಟೋ ಸ್ಫೋಟ: ಪ್ರಯಾಣಿಕನ ಗುರುತು ಪತ್ತೆ
ಮಂಗಳೂರು, ನ. ೨೦: ಮಂಗಳೂರಿನಲ್ಲಿ ಆಟೋ ಸ್ಫೋಟಗೊಂಡಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮೊಹಮ್ಮದ್ ಶಾರೀಕ್ (೨೪) ಎಂದು ಗುರುತಿಸಲಾಗಿದ್ದು, ಈ ಹಿಂದೆಯೂ ಆತ ಭಯೋತ್ಪಾದನೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ. ಗೋಡೆಯ ಮೇಲೆ ಭಯೋತ್ಪಾದಕ ಬರಹ ಬರೆದಿದ್ದ ಪ್ರಕರಣದಲ್ಲಿ ಶರೀಕ್ನ್ನು ೨೦೨೦ ರ ನವೆಂಬರ್ ನಲ್ಲಿ ಬಂಧಿಸಲಾಗಿತ್ತು. ಆತ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ. ತೀರ್ಥಹಳ್ಳಿಯವನಾದ ಶಾರೀಕ್ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ತನಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ನಿನ್ನೆ ದಿನ ಆಟೋದಲ್ಲಿ ಕುಕ್ಕರ್ ಐಇಡಿಯೊಂದಿಗೆ ತೆರಳುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಆಟೋ ಚಾಲಕ ಪುರುಷೋತ್ತಮ್ಗೂ ತೀವ್ರ ಗಾಯಗಳಾಗಿತ್ತು. ಮಂಗಳೂರಿನಲ್ಲಿ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿ ಶಾರೀಕ್ ಐಇಡಿಯನ್ನು ನಿರ್ದಿಷ್ಟ ಗುರಿಯೊಂದಿಗೆ ಅಳವಡಿಸಲು ಉದ್ದೇಶಿಸಿದ್ದ. ಆದರೆ ಆಟೋ ರಿಕ್ಷಾದಲ್ಲೇ ಸ್ಫೋಟಗೊಂಡಿದೆ. ವಿಧಿವಿಜ್ಞಾನ ತಂಡ ತನಿಖೆ ಪ್ರಾರಂಭಿಸಿದ್ದು, ಪ್ರೆಷರ್ ಕುಕ್ಕರ್ನ ಒಳಗೆ ಸರ್ಕ್ಯೂಟ್ ಮತ್ತು ಟೈಮರ್ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಉಗ್ರರ ಕೃತ್ಯ ಎಂದು ತಿಳಿದುಬಂದಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಆ ಜಾಲವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬAಧ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಇದೊಂದು ಉಗ್ರರ ಕೃತ್ಯ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಕಲಿ ಗುರುತಿನ ಚೀಟಿ, ನಕಲಿ ವಿಳಾಸ ಬಳಸಿ ಈ ಕೃತ್ಯ ನಡೆಸಲಾಗಿದೆ. ನಕಲಿ ವಿಳಾಸ ಹುಬ್ಬಳ್ಳಿದೆಂದು ಗೊತ್ತಾಗಿದೆ. ಎನ್ಐಎ, ಐಬಿ ಸ್ಥಳದಲ್ಲೇ ಬೀಡು ಬಿಟ್ಟಿದೆ, ಅವರ ಜಾಡನ್ನು ಹಿಡಿಯಲು ಎನ್ಐಎ, ತನಿಖೆ ಮುಂದುವರೆಸಿದೆ ಎಂದು ಹೇಳಿದ್ದಾರೆ. ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ ಇದೆ. ಇದೊಂದು ವ್ಯವಸ್ಥಿತ ಜಾಲ, ಆ ಜಾಲವನ್ನು ಪತ್ತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿರುವಾಗಲೇ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗುತ್ತಿದ್ದು, ಈ ವಿಚಾರ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಈ ಸ್ಫೋಟವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ.
ನೈಟ್ಕ್ಲಬ್ನಲ್ಲಿ ಗುಂಡಿನ ದಾಳಿ : ಐವರು ಸಾವು
ವಾಷಿಂಗ್ಟನ್, ನ. ೨೦: ಅಮೆರಿಕದ ಕೊಲೊರಾಡೋ ಸ್ಟಿçಂಗ್ಸ್ನಲ್ಲಿರುವ ಎಲ್ಜಿಬಿಟಿಕ್ಯು ನೈಟ್ ಕ್ಲಬ್ನಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ ಐವರು ಸಾವನ್ನಪ್ಪಿದ್ದಾರೆ ಮತ್ತು ೧೮ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಸ್ಥಳೀಯ ಕ್ಲಬ್ನಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ೧೮ ಮಂದಿ ಗಾಯಗೊಂಡಿದ್ದಾರೆ ಮತ್ತು ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರ ಪಮೇಲಾ ಕ್ಯಾಸ್ಟ್ರೋ ಹೇಳಿದ್ದಾರೆ. ಕ್ಲಬ್ ಕ್ಯೂ ಎಂದು ಕರೆಯಲ್ಪಡುವ ಕ್ಲಬ್ನಲ್ಲಿ ನಡೆದ ಗುಂಡಿನ ದಾಳಿಯ ಕುರಿತು ಶನಿವಾರ ಮಧ್ಯರಾತ್ರಿಗಿಂತ ತುಸು ಮುನ್ನ ಪೊಲೀಸರಿಗೆ ಆರಂಭಿಕ ಫೋನ್ ಕರೆ ಬಂದಿತ್ತು ಎಂದು ಪಮೇಲಾ ಕ್ಯಾಸ್ಟೊçà ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಂಕಿತ ವ್ಯಕ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣದ ತನಿಖೆಯಲ್ಲಿ ಎಫ್ಬಿಐ ಸಹಾಯ ಪಡೆಯುತ್ತಿರುವುದಾಗಿ ಪಮೇಲಾ ಕ್ಯಾಸ್ಟೊçà ತಿಳಿಸಿದ್ದಾರೆ.
೨ನೇ ಟಿ೨೦ ಪಂದ್ಯ : ಗೆಲುವಿನ ಲಯಕ್ಕೆ ಮರಳಿದ ಭಾರತ
ಮೌಂಟ್ಮೌAಗನುಯಿ, ನ. ೨೦: ನ್ಯೂಜಿಲ್ಯಾಂಡ್ ವಿರುದ್ಧದ ೨ನೇ ಟಿ೨೦ ಪಂದ್ಯದಲ್ಲಿ ಟೀಂ ಇಂಡಿಯಾ ೬೫ ರನ್ಗಳಿಂದ ಭರ್ಜರಿ ಜಯ ಗಳಿಸಿದೆ. ಮೌಂಟ್ಮೌAಗನುಯಿಯಲ್ಲಿ ನಡೆದ ಎರಡನೇ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ ಓವರ್ ನಲ್ಲಿ ೧೯೧ ರನ್ ಪೇರಿಸಿತ್ತು. ಅಲ್ಲದೆ ನ್ಯೂಜಿಲ್ಯಾಂಡ್ಗೆ ೧೯೨ ರನ್ಗಳ ಮೊತ್ತದ ಬೃಹತ್ ಮೊತ್ತ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲ್ಯಾಂಡ್ಗೆ ದೀಪಕ್ ಹೂಡಾ ಮಾರಕವಾದರು. ಇನ್ನು ೧೨೬ ರನ್ಗಳಿಗೆ ನ್ಯೂಜಿಲ್ಯಾಂಡ್ ಆಲೌಟ್ ಆಗುವ ಮೂಲಕ ಭಾರತಕ್ಕೆ ಶರಣಾಯಿತು. ನ್ಯೂಜಿಲ್ಯಾಂಡ್ ಪರ ಬ್ಯಾಟಿಂಗ್ನಲ್ಲಿ ಡೆವೊನ್ ಕಾನ್ವೇ ೨೫, ಕೇನ್ ವಿಲಿಯಮ್ಸನ್ ೬೧, ಗ್ಲೇನ್ ಪಿಲಿಪ್ಸ್ ೧೨ ಮತ್ತು ಮಿಚೆಲ್ ೧೦ ರನ್ ಪೇರಿಸಿದ್ದಾರೆ. ಭಾರತದ ಪರ ಬೌಲಿಂಗ್ನಲ್ಲಿ ದೀಪಕ್ ಹೂಡಾ ೪, ಮೊಹಮ್ಮದ್ ಸಿರಾಜ್ ಮತ್ತು ಚಹಾಲ್ ತಲಾ ೨ ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ಮತ್ತು ಭುವನೇಶ್ವರ್ ಕುಮಾರ್ ತಲಾ ೧ ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾ ಪರ ಇಶಾನ್ ಕಿಶನ್ ೩೬ ರನ್ ಪೇರಿಸಿ ಉತ್ತಮ ಓಪನಿಂಗ್ ನೀಡಿದರು. ಆದರೆ ರಿಷಬ್ ಪಂತ್ ೬ ರನ್ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ತಂಡ ಬೃಹತ್ ಪೇರಿಸಲು ನೆರವಾದರು. ಸೂರ್ಯಕುಮಾರ್ ೫೧ ಎಸೆತಗಳಲ್ಲಿ ೧೧೧ ರನ್ ಪೇರಿಸಿ ಅಜೇಯರಾಗಿ ಉಳಿದರು. ಶ್ರೇಯಸ್ ಅಯ್ಯರ್ ೧೩ ಹಾಗೂ ನಾಯಕ ಹಾರ್ದಿಕ್ ಪಾಂಡ್ಯಾ ೧೩ ರನ್ ಪೇರಿಸಿ ಔಟಾದರು. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಟೀಮ್ ಸೌಥಿ ೩, ಫರ್ಗ್ಯೂಸನ್ ೨ ಮತ್ತು ಸೋಧಿ ೧ ವಿಕೆಟ್ ಪಡೆದಿದ್ದಾರೆ. ಮೂರು ಪಂದ್ಯಗಳ ಟಿ೨೦ ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.
ಮೆಹ್ರೌಲಿ ಅರಣ್ಯದಲ್ಲಿ ತಲೆಬುರುಡೆ, ದವಡೆಯ ಭಾಗ ಪತ್ತೆ
ನವದೆಹಲಿ, ನ. ೨೦: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರು ಮೆಹ್ರೌಲಿ ಅರಣ್ಯದಿಂದ ಮಾನವ ತಲೆಬುರುಡೆ ಮತ್ತು ದವಡೆಯ ಭಾಗವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಮಾನವ ದೇಹದ ಇತರ ಭಾಗಗಳ ಮೂಳೆಗಳೂ ಪತ್ತೆಯಾಗಿವೆ. ಕಾಡಿನಲ್ಲಿ ಪತ್ತೆಯಾಗಿರುವ ಶವದ ಅವಶೇಷಗಳು ೨೭ ವರ್ಷದ ಶ್ರದ್ಧಾ ವಾಕರ್ ಅವರದ್ದಾಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ವಿಧಿವಿಜ್ಞಾನ ಪ್ರಯೋಗಾಲಯದ ತಂಡದ ಪರೀಕ್ಷೆ ನಂತರವೇ ಇದು ದೃಢೀಕರಿಸಲ್ಪಡುತ್ತದೆ. ಭಾನುವಾರ, ದೆಹಲಿ ಪೊಲೀಸ್ ತಂಡವು ಅಫ್ತಾಬ್ ನನ್ನು ಛತ್ತರ್ಪುರ ಪಹಾರಿ ಪ್ರದೇಶದಲ್ಲಿ ಅವರು ನೆಲೆಸಿದ್ದ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಶ್ರದ್ಧಾಳ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದು ಆಕೆ ಕೆಲವು ಬಟ್ಟೆಗಳು ಮತ್ತು ಶೂಗಳು ಪತ್ತೆಯಾಗಿವೆ. ತನಿಖೆಯ ಸಮಯದಿಂದ ಪೊಲೀಸ್ ತಂಡ ಹೊರಡುವವರೆಗೆ, ಅರೆಸೇನಾ ಪಡೆಗಳು ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಮನೆಯ ಹೊರಗೆ ಮತ್ತು ಸುತ್ತಲಿನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ನಿಯೋಜಿಸಲಾಗಿತ್ತು. ಮತ್ತೊಂದೆಡೆ, ಸುಮಾರು ೨೦೦ ಪೊಲೀಸರ ತಂಡವು ಶೋಧ ಕಾರ್ಯಾಚರಣೆಗಾಗಿ ಮೆಹ್ರೌಲಿ ಅರಣ್ಯಕ್ಕೆ ತಲುಪಿತು. ಶೋಧ ಕಾರ್ಯಾಚರಣೆಯಲ್ಲಿ, ಪೊಲೀಸ್ ತಂಡವು ಅರಣ್ಯದಿಂದ ಕೆಲವು ಅವಶೇಷಗಳು ಮತ್ತು ಕತ್ತರಿಸಿದ ಮೂಳೆಗಳನ್ನು ವಶಪಡಿಸಿಕೊಂಡಿದೆ.