ಮಡಿಕೇರಿ, ನ. ೧೯: ಪ್ರಸಕ್ತ ಸಾಲಿಗೆ ಎಸ್‌ಎಫ್‌ಸಿ ಹಾಗೂ ನಗರಸಭಾ ಅನುದಾನದಡಿ ಶೇ. ೨೪.೧೦, ಶೇ. ೭.೨೫ ಹಾಗೂ ಶೇ.೫ ರ ಯೋಜನೆಯ ಕಲ್ಯಾಣ ಕಾರ್ಯಕ್ರಮದಡಿ ಮಡಿಕೇರಿ ನಗರಸಭಾ ವತಿಯಿಂದ ವೈಯಕ್ತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಿಯಾ ಯೋಜನೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ನಗರ ಬಡತನ ನಿರ್ಮೂಲನ ಶಾಖೆಯಿಂದ ಪಡೆಯಬಹುದಾಗಿದೆ.
ಶೇ. ೨೪.೧೦ (ಪರಿಶಿಷ್ಟ ಜಾತಿ ಹಾಗೂ ಪರಿಶೀಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮ): ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಎಂಬಿಬಿಎಸ್ ಮತ್ತು ಬಿಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಡೆಸ್ಕ್ಟಾಪ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಖರೀದಿಗಾಗಿ ರೂ. ೫೦ ಸಾವಿರ ಮೀರದಂತೆ ಪ್ರವೇಶದ ನಂತರ ಒಂದು ಬಾರಿ ಸಹಾಯಧನ ನೀಡುವುದಕ್ಕಾಗಿ ಮತ್ತು ಎಂಬಿಬಿಎಸ್, ಬಿಇ., ಪಿಎಚ್‌ಡಿ., ಹಾಗೂ ಎಂಫಿಲ್ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೇ. ೫೦ ರಷ್ಟು ಪ್ರವೇಶ ಶುಲ್ಕ ಪಾವತಿಸಲು ರೂ. ೧.೪೫ ಲಕ್ಷ ನಗರಸಭಾ ಅನುದಾನದಡಿ ಕಾಯ್ದಿರಿಸಿದೆ.
ಪಾಸ್‌ಪೋರ್ಟ್ ಅಳತೆ ಭಾವಚಿತ್ರ (೨), ಜಾತಿ ಮತ್ತು ೫ ವರ್ಷ ಒಳಗಿನ ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಪ್ರಸಕ್ತ ಸಾಲಿನ ವ್ಯಾಸಂಗ ದೃಢೀಕರಣ ಪತ್ರ, ಪ್ರವೇಶ ಶುಲ್ಕ ರಶೀದಿ, ಸಮಾಜ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯ ಪಡೆದುಕೊಂಡಿರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ ಈ ದಾಖಲೆಗಳನ್ನು ಸಲ್ಲಿಸಬೇಕು.
ಶೇ.೭.೨೫ (ನಗರ ಬಡತನ ಕಲ್ಯಾಣ ಕಾರ್ಯಕ್ರಮ): ಇತರೆ ಹಿಂದುಳಿದ ಜನಾಂಗದವರ ಶಸ್ತçಚಿಕಿತ್ಸೆಗೆ ಒಳಪಟ್ಟಿರುವ ಫಲಾನುಭವಿಗಳಿಗೆ ಆರ್ಥಿಕ ಧನಸಹಾಯ ರೂ. ೦.೭೬ ಲಕ್ಷ ನಗರಸಭಾ ಅನುದಾನ ಕಾಯ್ದಿರಿಸಿದೆ.
ಪಾಸ್‌ಪೋರ್ಟ್ ಅಳತೆ ಭಾವಚಿತ್ರ (೨), ಜಾತಿ ಮತ್ತು ೫ ವರ್ಷ ಒಳಗಿನ ಆದಾಯ ಪ್ರಮಾಣ ಪತ್ರ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಪ್ರಸಕ್ತ ಸಾಲಿನ ವ್ಯಾಸಂಗ ದೃಢೀಕರಣ ಪತ್ರ, ಪ್ರವೇಶ ಶುಲ್ಕ ರಶೀದಿ, ಬ್ಯಾಂಕ್ ಪಾಸ್ ಪುಸ್ತಕ, ಶಸ್ತç ಚಿಕಿತ್ಸೆ ಒಳಪಟ್ಟಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು.
ಶೇ.೫ (ವಿಕಲಚೇತನರ ಕಲ್ಯಾಣ ಕಾರ್ಯಕ್ರಮ): ನಗರಸಭಾ ವ್ಯಾಪ್ತಿಯಲ್ಲಿ ವಾಸವಿರುವ ವಿಕಲಚೇತನರಿಗೆ ಸಾಧನ ಸಲಕರಣೆಗಳಿಗೆ ಸಹಾಯಧನ ನೀಡಲು ರೂ. ೧.೫೦ ಲಕ್ಷ ಎಸ್‌ಎಫ್‌ಸಿ ನಿಧಿಯಡಿ ಕಾಯ್ದಿರಿಸಿದೆ. ಪಾಸ್‌ಪೋರ್ಟ್ ಅಳತೆ ಭಾವಚಿತ್ರ (೨), ಜಾತಿ ಮತ್ತು ೫ ವರ್ಷ ಒಳಗಿನ ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಪ್ರಸಕ್ತ ಸಾಲಿನ ವ್ಯಾಸಂಗ ದೃಢೀಕರಣ ಪತ್ರ, ಪ್ರವೇಶ ಶುಲ್ಕ ರಶೀದಿ, ಬ್ಯಾಂಕ್ ಪಾಸ್ ಪುಸ್ತಕ, ವಿಕಲಚೇತನ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯ ಪಡೆದುಕೊಂಡಿರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಬೇಕು.
ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿದ ಅಂಗವಿಕಲ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹಾಗೂ ಪೋಷಣ ವೆಚ್ಚಕ್ಕಾಗಿ ರೂ. ೦.೬೫ ಲಕ್ಷ ನಗರಸಭಾ ಅನುದಾನದಡಿ ಕಾಯ್ದಿರಿಸಿದೆ. ಪಾಸ್‌ಪೋರ್ಟ್ ಅಳತೆ ಭಾವಚಿತ್ರ (೨), ಜಾತಿ ಮತ್ತು ೫ ವರ್ಷ ಒಳಗಿನ ಆದಾಯ ಪ್ರಮಾಣ ಪತ್ರ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಪ್ರಸಕ್ತ ಸಾಲಿನ ವ್ಯಾಸಂಗ ದೃಢೀಕರಣ ಪತ್ರ, ಪ್ರವೇಶ ಶುಲ್ಕ ರಶೀದಿ, ಬ್ಯಾಂಕ್ ಪಾಸ್ ಪುಸ್ತಕ, ವಿಕಲಚೇತನ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯ ಪಡೆದುಕೊಂಡಿರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತ ವಿಜಯ ತಿಳಿಸಿದ್ದಾರೆ.