ಸೋಮವಾರಪೇಟೆ, ನ. ೨೦: ಕೂಡಿಗೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ರಿಲೇ ವಿಭಾಗದಲ್ಲಿ ಮಡಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಈರ್ವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳಾದ ಸೋಮವಾರಪೇಟೆ ದೊಡ್ಡಹಣಕೋಡು ಗ್ರಾಮದ ಹೆಚ್.ಜೆ. ಪ್ರಕಾಶ್ ಅವರ ಪುತ್ರಿ ಹೆಚ್.ಪಿ. ಶಾಂಭವಿ, ೬೦೦ ಮೀಟರ್ ರಿಲೇಯಲ್ಲಿ ಪ್ರಥಮ, ೪೦೦ ಮೀಟರ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಅಂತೆಯೇ ಕಾರೆಕೊಪ್ಪ ಗ್ರಾಮದ ಶಂಭು ಅವರ ಪುತ್ರಿ ರೀತಾ, ೮೦ ಮೀಟರ್ ಹಾಗೂ ೪೦೦ ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.