ಮಡಿಕೇರಿ, ನ. ೧೯: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಟರ್ಫ್ ಮೈದಾನದಲ್ಲಿ ನಡೆದ ಮೈಸೂರು ವಲಯ ಮಟ್ಟದ ಬಾಲಕ ಹಾಗೂ ಬಾಲಕಿಯರ ಹಾಕಿ ಪಂದ್ಯಾಟದಲ್ಲಿ ಕೊಡಗು ಚಾಂಪಿಯನ್ ಪಟ್ಟ ಅಲಂಕರಿಸಿದೆ.

೫೦ ನಿಮಿಷದ ನಾಕೌಟ್ ಮಾದರಿಯ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ತಂಡಗಳು ಗೆಲುವಿಗಾಗಿ ಸೆಣಸಾಡಿದವು. ೧೪ ಹಾಗೂ ೧೭ ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ನಾಲ್ಕು ವಿಭಾಗದ ಪಂದ್ಯಾಟದಲ್ಲಿ ಕೊಡಗು ೩ ಪಂದ್ಯವನ್ನು ಗೆದ್ದು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.

೧೪ ವರ್ಷದೊಳಗಿನ ಬಾಲಕರ ಪಂದ್ಯಾಟದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕೊಡಗು ತಂಡ ಹಾಸನ ಎದುರು ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಕೊಡಗು ಪರ ಲಿನಿತ್ ಅಯ್ಯಪ್ಪ, ಪ್ರೀತಂ, ಯುವರಾಜ್ ತಲಾ ಒಂದು, ಅನೂಪ್ ೨ ಗೋಲು ಗಳಿಸಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು. ಹಾಸನ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

೧೪ ವರ್ಷದೊಳಗಿನ ಬಾಲಕಿಯರ ಪಂದ್ಯಾಟದಲ್ಲಿ

(ಮೊದಲ ಪುಟದಿಂದ) ಹಾಸನ ಎದುರು ೭-೬ ಗೋಲುಗಳ ಅಂತರದಲ್ಲಿ ಕೊಡಗು ಗೆಲುವು ಸಾಧಿಸಿತು. ೧-೧ ಸಮಬಲ ಸಾಧಿಸಿದ ಹಿನ್ನೆಲೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಈ ವೇಳೆ ಕೊಡಗು ಪರ

ಕೆ.ಎ. ಪೂರ್ವಿ ಪೂವಮ್ಮ, ಸಿ.ಜಿ. ನಿಷಾ, ಎಸ್. ಮನಸ್ವಿ, ಭಾವನ,

ಬೊಳ್ಳಮ್ಮ, ಕೃತಿಕಾ ತಲಾ ಒಂದೊAದು ಗೋಲು ಬಾರಿಸಿ ಗೆಲುವಿನ ನಗೆ ಬೀರಿದರು. ಹಾಸನ ತಂಡದ ಪರ ಸರಸ್ವತಿ, ಜಾಗೃತಿ, ಮಾದುರ್ಯ, ಮನಸ್ವಿ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿ ದ್ವಿತೀಯ ಸ್ಥಾನ ಪಡೆಯಿತು.

೧೭ ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವನ್ನು ೫-೦ ಅಂತರದಲ್ಲಿ ಮಣಿಸಿ ಕೊಡಗು ತಂಡ ಜಯಗಳಿಸಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದುಕೊಂಡಿತು. ಕೊಡಗು ಪರ ವಿಪುಲ್ ಉತ್ತಪ್ಪ ಯು.ಜೆ. ಮನ್ವಿತ್ ಎಂ. ಸೌರವ್ ನಾಣ್ಣಯ್ಯ ತಲಾ ಒಂದು ಗೋಲು ದಾಖಲಿಸಿದರೆ ಸೋಹನ್ ಕಾರ್ಯಪ್ಪ ೨ ಗೋಲು ಹೊಡೆದರು.

೧೭ ವರ್ಷದೊಳಗಿನ ಬಾಲಕಿಯರ ಪಂದ್ಯಾಟ ಕೊಡಗು ಹಾಗೂ ಹಾಸನ ತಂಡದ ನಡುವೆ ನಡೆಯಿತು. ಪ್ರಬಲ ಪೈಪೋಟಿಯಲ್ಲಿ ಹಾಸನ ೧-೦ ಅಂತರದಲ್ಲಿ ಗೆದ್ದುಕೊಂಡಿತು. ಕೊಡಗು ಪರಬಾವಗೊಂಡಿತು. ಹಾಸನ ಪರ ನಿಶ್ಚಿತ ಏಕೈಕ ಗೋಲು ಬಾರಿಸಿದರು.

ತೀರ್ಪುಗಾರರಾಗಿ ಚೆಕ್ಕೇರ ಆದರ್ಶ್, ಮೈಂದಪAಡ ಡ್ಯಾನಿ ದೇವಯ್ಯ, ಬಲ್ಲಚಂಡ ನಾಣಯ್ಯ, ಚೇಂದೀರ ಡ್ಯಾನಿ, ಮಣವಟ್ಟೀರ ಅಯ್ಯಪ್ಪ, ರತೀಶ್, ಪೂರ್ಣೇಶ್, ತಮ್ಮಯ್ಯ, ತಾಂತ್ರಿಕ ವಿಭಾಗದಲ್ಲಿ ಪರಿಚನ ಕಿರಣ್, ಪ್ರೇಮಲತಾ ಶೆಟ್ಟಿ, ಕೆಮ್ಮಾರನ ಗಣೇಶ್ ಕುಮಾರ್ ಕಾರ್ಯನಿರ್ವಹಿಸಿದರು.