ಸುಂಟಿಕೊಪ್ಪ, ನ. ೧೯: ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿ, ನಿವೇಶನ ರಹಿತರಿಗೆ ಸೂರು ಕಲ್ಪಿಸಿಕೊಡಿ, ಹದಗೆಟ್ಟ ರಸ್ತೆಗೆ ಕಾಯಕಲ್ಪ ಕಲ್ಪಿಸಿ, ಚಿಕ್ಲಿ ಹೊಳೆ ಜಲಾಶಯದಲ್ಲಿ ಪ್ರವಾಸಿಗರ ಮೋಜು ಮಸ್ತಿಗೆ ಕಡಿವಾಣ ಹಾಕಿ, ಎಂದು ಕಂಬಿಬಾಣೆ ಗ್ರಾಮಸ್ಥರು ಜಿಲ್ಲಾಧಿಕಾರಿÀಯವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಎಂಬ ಸರಕಾರಿ ಕಾರ್ಯಕ್ರಮವು ಕಂಬಿಬಾಣೆ ಅತ್ತೂರು ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಬಿ.ಸಿ. ಸತೀಶ್ ಅವರು ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟು ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಟಾಟಾ ಎಸ್ಟೇಟಿಗೆ ಸೇರಿದ ೧೨.೫ ಎಕರೆ ಸರಕಾರದ ಪೈಸಾರಿ ಜಾಗವನ್ನು ಕಂದಾಯ ಇಲಾಖೆ ಸರ್ವೆ ನಡೆಸಿದ್ದು ಗ್ರಾಮಸ್ಥರಿಗೆ ನಿವೇಶನ ಸೂರು ಹಾಗೂ ಸ್ಮಶಾನ ಜಾಗಕ್ಕೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಬೇಕೆAದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ. ಶಶಿಕಾಂತ್ ರೈ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ, ಮೋಹನ ಮನವಿ ಮಾಡಿದರು. ಈ ಜಾಗ ಟಾಟಾ ತೋಟದ ಒಳಗೆ ಇದ್ದು ಬಡವರಿಗೆ ಮನೆ ನಿರ್ಮಿಸಿ ಮೂಲಭೂತ ಸೌಕರ್ಯ ಕಲ್ಪಿಸಲು ಕಷ್ಟವಾಗಲಿದೆ. ಬದಲಿ ಜಾಗ ರಸ್ತೆ ಬದಿಯಲ್ಲಿದ್ದು ಇದನ್ನು ನೀಡಲು ಟಾಟಾ ಎಸ್ಟೇಟ್‌ನವರು ಮುಂದೆ ಬಂದಿದ್ದಾರೆ. ಇದನ್ನು ಬಳಸಿಕೊಳ್ಳಬಹುದೆಂದು ಶಶಿಕಾಂತ್ ರೈ ಸಲಹೆ ನೀಡಿದರು. ಇದಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ವಿರೋಧ ವ್ಯಕ್ತಪಡಿಸಿ ಸರಕಾರಿ ಪೈಸಾರಿ ಜಾಗದಲ್ಲೇ ಮನೆ ಕಟ್ಟಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

(ಮೊದಲ ಪುಟದಿಂದ) ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಇದು ಇತ್ಯರ್ಥವಾಗಲು ಹಲವು ವರ್ಷಗಳೇ ಕಳೆಯಲಿದ್ದು ಶೀಘ್ರದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಆಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಭೂತನ ಕಾಡು, ಕೊಡಗರಹಳ್ಳಿ, ಕಂಬಿಬಾಣೆ ಚಿಕ್ಲಿಹೊಳೆ ರಸ್ತೆ ತೀರಾ ಹಾಳಾಗಿದ್ದು, ಜನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು ವೃದÀ್ಧರು ಓಡಾಡಲು ಸಾಧÀ್ಯವಾಗಿಲ್ಲ; ರಸ್ತೆ ನಿರ್ಮಿಸಿಕೊಡಿ ಎಂದು ಬೆಳೆಗಾರರಾದ ಮುತ್ತಣ್ಣ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಕಿರಣ್ ಇದಕ್ಕೆ ಉತ್ತರಿಸಿ ಈ ರಸ್ತೆಯ ೧೩೦೦ ಮೀಟರ್ ಕಾಂಕ್ರಿಟ್ ರಸ್ತೆ ನಿರ್ಮಿಸಲು ೨.೫ ಕೋಟಿ ರೂ. ಕಾವೇರಿ ನೀರಾವರಿ ನಿಗಮದಿಂದ ಟೆಂಡರ್‌ಗೆ ಅನುಮೋದನೆ ಲಭಿಸಿದೆ. ಡಿಸೆಂಬರ್‌ನಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಶಾಸಕರ ಅನುದಾನದಲ್ಲಿ ೧.೫ ಕೋಟಿ ಹಣದಲ್ಲಿ ಈ ರಸ್ತೆಗೆ ಕ್ರಿಯಾಯೋಜನೆ ತಯಾರಿಸಿದ್ದು, ಮುಂದಿನ ದಿನಗಳಲ್ಲಿ ಈ ಹಣ ಬಿಡುಗಡೆಯಾಗಲಿದೆ. ಅತಿವೃಷ್ಟಿಯಿಂದ ಕೊಡಗಿನ ೪೩,೦೦೦ ಸಾವಿರ ಹೆಕ್ಟೇರು ಜಾಗದಲ್ಲಿ ಬೆಳೆ ನಾಶವಾಗಿದೆ. ಈಗಾಗಲೇ ೭೨,೦೦೦ ಅರ್ಜಿಗಳು ಬಂದಿದೆ. ಎಲ್ಲಾ ಹೋಬಳಿಗಳಲ್ಲೂ ಬೆಳೆ ನಾಶವಾಗಿದೆ. ಕೇಂದ್ರ ಸರಕಾರದ ಮಾರ್ಗ ಸೂಚಿಯಂತೆ ರೈತರ ಖಾತೆಗೆ ಅರ್ಜಿ ಪರಿಶೀಲಿಸಿ ಹಣ ಸಂದಾಯವಾಗಲಿದೆ. ೧೧೦ ಕೋಟಿ ಬೆಳೆ ಪರಿಹಾರ ಕೃಷಿಕರಿಗೆ ಕೊಡಗು ಜಿಲ್ಲೆಯಲ್ಲಿ ಲಭಿಸಲಿದೆ. ಶೀಘ್ರದಲ್ಲೇ ಸರಕಾರ ಹಣ ಬಿಡುಗಡೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಡಾ. ಸತೀಶ್ ತಿಳಿಸಿದರು.

ಕಾಡಾನೆ ಮಾನವ ಸಂಘರ್ಷದಿAದ ಬೆಳೆಗಾರರು ಹೈರಾಣಾಗಿದ್ದಾರೆ. ಜೀವನ ನಡೆಸಲಾಗದ ಪರಿಸ್ಥಿತಿ ಬಂದಿದೆ. ಈಗಾಗಲೆ ತೊಂಡೂರು, ಅತ್ತೂರು ನಲ್ಲೂರು, ಕಂಬಿಬಾಣೆ, ೭ನೇ ಹೊಸಕೋಟೆಯಲ್ಲಿ ದಿನನಿತ್ಯ ಕಾಡಾನೆ ಹಾವಳಿಯಿಂದ ಜನಜೀವನ ತತ್ತರವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಗ್ರಾಮಸ್ಥರಾದ ಮಂಜುನಾಥ ರೈ ಕೋರಿದರು. ಕುಶಾಲನಗರ ವಲಯ ಅರಣ್ಯಧಿಕಾರಿ ಶಿವರಾಂ ಮಾತನಾಡಿ ಕಾಡಾನೆಯನ್ನು ನಾಡಿಗೆ ಬರದಂತೆ ಸೋಲಾರ್ ತಂತಿ ಅಳವಡಿಸಲಾಗುತ್ತಿದೆ. ಮಳೆ ನಿಂತ ನಂತರ ಕಂದಕ ನಿರ್ಮಿಸಲಾಗುವುದು ಎಂದರು.

ಚಿಕ್ಲಿ ಹೊಳೆ ಜಲಾಶಯಕ್ಕೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಗಾಂಜ ಸೇವಿಸಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದ್ದರಿಂದ ಅಲ್ಲಿಗೆ ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಬೇಕು. ಶೌಚಾಲಯ ನಿರ್ಮಿಸಬೇಕು. ಜಲಾಶಯದ ಪ್ರವಾಸಿ ಮಂದಿರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಮಾಜಿ ಸೈನಿಕ ಲವಶಾಂತಪ್ಪ ಆಗ್ರಹಿಸಿದರು. ಶೌಚಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ನೀರಾವರಿ ಇಲಾಖೆ ಮುಂದಾಗಬೇಕು ಶೀಘ್ರದಲ್ಲಿ ಅದು ಅನುಷ್ಠಾನವಾಗಲಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಕೊರೊನಾ ಸಂದರ್ಭ ೮ ಕುಟುಂಬಕ್ಕೆ ಪಡಿತರ ಚೀಟಿ ಬಿಪಿಎಲ್ ಕಾರ್ಡು ರದ್ದಾಗಿದೆ. ಆಹಾರ ಇಲಾಖೆಗೆ ಮನವಿ ಸಲ್ಲಿಸಿ ಸಾಕಾಗಿದೆ. ಬಡವರಾದ ನಮಗೆ ಪಡಿತರ ಚೀಟಿ ಕಲ್ಪಿಸಿಕೊಡಿ ಎಂದು ಶೋಭಾ, ಆಶಾ ಕಾರ್ಯಕರ್ತೆಯರು ಮನವಿ ನೀಡಿದರು. ಪಡಿತರ ಚೀಟಿ ಅರ್ಜಿದಾರರ ಅರ್ಜಿಯನ್ನು ಪರಿಶೀಲಿಸಿ ೨ ತಿಂಗಳಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಿಕ್ಲಿಹೊಳೆ ಪ್ರದೇಶದಲ್ಲಿ ಸರಕಾರಿ ಶಾಲೆ ಅನತಿ ದೂರದಲ್ಲಿದ್ದು ಈ ಭಾಗಕ್ಕೆ ವಾಹನದಲ್ಲಿ ಬರುವವರು ಹಗಲಿನ ವೇಳೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮದÀ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಾರೆ. ಇಲ್ಲಿಗೆ ಪೊಲೀಸರನ್ನು ನೇಮಿಸಿ ಇದನ್ನು ತಡೆಗಟ್ಟಬೇಕೆಂದು ಅಂಗನವಾಡಿ ಕಾರ್ಯಕರ್ತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸಂಬAಧಿಸಿದAತೆ ೫೫ ಅರ್ಜಿಗಳು ಸಲ್ಲಿಕೆಯಾದವು.

ಈ ಸಂದರ್ಭ ಜಿಲ್ಲಾಧಿಕಾರಿ ೧೮ ಮಂದಿಗೆ ಪಿಂಚಣಿಗೆ ಸಂಬAಧಿಸಿದ ಆದೇಶ ಪತ್ರ ವಿತರಿಸಿದರು. ತಹಶೀಲ್ದಾರ್ ಪ್ರಕಾಶ್, ಉಪ ತಹಶೀಲ್ದಾರ್ ಹೆಚ್.ಕೆ. ಶಿವಪ್ಪ, ಕೃಷಿ ಇಲಾಖೆ ಜಂಟಿ ನಿದೆೆÃðಶಕಿ ಶಬಾನಶೇಕ್, ಕಾರ್ಮಿಕ ಅಧಿಕಾರಿ ಅನಿಲ್, ಹಿಂದುಳಿದ ವರ್ಗಗಳ ಇಲಾಖೆ ಉಪನಿರ್ದೇಶಕ ಮಂಜುನಾಥ್, ಪದವಿ ಪೂರ್ವ ಕಾಲೇಜು ಇಲಾಖೆ ಉಪನಿರ್ದೇಶಕ ಪುಟ್ಟರಾಜು, ಭೂ ವಿಜ್ಞಾನ ಇಲಾಖೆ ಅಧಿಕಾರಿ ಶ್ರೀನಿವಾಸ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರಮೋದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ವೆಂಕಟೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ನಾಗೇಂದ್ರ, ಅಬಕಾರಿ ಇಲಾಖೆ ಅಧೀಕ್ಷಕಿ ಚೈತ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುನಾಗಪ್ಪ, ಮತ್ತಿತರರು ಹಾಜರಿದ್ದರು.