ಮಡಿಕೇರಿ, ನ. ೧೯: ಶ್ರೀರಾಮಕೃಷ್ಣ ಶಾರದಾಶ್ರಮ ಪೊನ್ನಂಪೇಟೆ, ವಿವೇಕಾನಂದ ಆರೋಗ್ಯಧಾಮ (ಪ್ರಕೃತಿ ಚಿಕಿತ್ಸೆ ಯೋಗ ಹಾಗೂ ಫಿಜಿಯೋಥೆರಪಿ ವಿಭಾಗ) ವತಿಯಿಂದ ತಾ. ೨೧ ರಿಂದ ತಾ ೨೭ರವರೆಗೆ ಉಚಿತ ಯೋಗ ಚಿಕಿತ್ಸಾ ಶಿಬಿರ ನಡೆಯಲಿದೆ. ಈ ದಿನಗಳಲ್ಲಿ ಬೆಳಿಗ್ಗೆ ೭.೩೦ ರಿಂದ ೮.೩೦ರವರೆಗೆ ದೀರ್ಘಕಾಲಿನ ಕಾಯಿಲೆಗಳು ಹಾಗೂ ವಿವಿಧ ರೀತಿಯ ನೋವುಗಳಿಗೆ ಸೂಕ್ತ ವ್ಯಾಯಾಮಗಳು, ಯೋಗಾಸನಗಳು ಹಾಗೂ ಪ್ರಾಣಾಯಾಮಗಳನ್ನು ತಿಳಿಸಿಕೊಡಲಾಗುವುದು. ಶಿಬಿರವನ್ನು ಪ್ರಕೃತಿ ಚಿಕಿತ್ಸಾ ವೈದ್ಯರಾದ ಡಾ. ಕಾರ್ತಿಕ್ ರವರು ನಡೆಸಿಕೊಡಲಿದ್ದಾರೆ.