ಮಡಿಕೇರಿ, ನ. ೨೦: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮರ್ಕರ ಯೂತ್ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿರುವ ೭ನೇ ವರ್ಷದ ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಡಿ. ೨ ರ ತನಕ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ ೧೯ ತಂಡಗಳು ಸೆಣೆಸಾಡಲಿವೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. ೩೦ ಸಾವಿರ ನಗದು, ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದು ಕ್ಲಬ್ ಪ್ರಮುಖ ಟಿ.ಆರ್. ಧ್ರುವ ಮಾಹಿತಿ ನೀಡಿದರು.
ಈ ಸಂದರ್ಭ ಕ್ರಿಕೆಟ್ ಕ್ಲಬ್ ವ್ಯವಸ್ಥಾಪಕ ಅಜಯ್, ಸದಸ್ಯರುಗಳಾದ ಪ್ರಿನ್ಸ್ ಕುಶಾಲಪ್ಪ, ಕಿಂಬರ್ಲಿ ರಿಕ್ರಿಯೆಷನ್ ಸ್ಥಾಪಕ ಕೆ.ಜಿ. ಮದನ್, ಜೆಡಿಎಸ್ ಯುವ ಘಟಕದ ಪ್ರಮುಖ ರವಿಕಿರಣ್, ಕೆ.ಟಿ. ಪ್ರಶಾಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.