ಗೋಣಿಕೊಪ್ಪ ವರದಿ, ನ. ೧೯: ಪಿಸಿ ಕ್ಲಬ್ ಮತ್ತು ಪೊನ್ನಂಪೇಟೆ ನಿಸರ್ಗ ಜೆಸಿ ವತಿಯಿಂದ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಚೆಸ್ ಪಂದ್ಯದ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಎನ್. ಧ್ಯಾನ್ ಪ್ರಥಮ ಸ್ಥಾನ ಪಡೆದುಕೊಂಡರು. ೧೦೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಫಲಿತಾಂಶ : ೪ ವಿಭಾಗಗಳಿಗೆ ನಡೆದ ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಮುಕ್ತ ವಿಭಾಗದಲ್ಲಿ ೬, ಪ್ರಾಥಮಿಕ, ಪ್ರೌಢ ವಿಭಾಗದಲ್ಲಿ ೭ ಜನರಿಗೆ ಬಹುಮಾನ ನೀಡಲಾಯಿತು. ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಎನ್. ಧ್ಯಾನ್, ಎಂ.ಎ. ಆರಾಧ್ಯ, ಪೊನ್ನಿಮಾಡ ಬೋಜಮ್ಮ, ವಿಭಾ ಶೆಟ್ಟಿ, ಹೆಚ್.ಎಸ್. ಅನುಶಾ, ಭವನ್ ತಿಮ್ಮಯ್ಯ, ಪ್ರಾಥಮಿಕ ವಿಭಾಗದಲ್ಲಿ ಬಿ.ಪಿ. ಅನುಷ್ಕಾ, ಎಂ.ಕೆ. ಗೌತಂ, ಕೆ. ಕಿತೇಶ್, ಎಂ.ಕೆ. ಗಣೇಶ್, ಪ್ರಥಮ್ ಮುತ್ತಮ್ಮ, ಕರುಣ್ ಕುಶಾಲಪ್ಪ, ಡಿ. ಚೈತನ್ಯ, ಪ್ರೌಢ ವಿಭಾಗದಲ್ಲಿ ಲಿಜೋ ಜೇಮ್ಸ್, ದಿಗಂತ್, ಅಮೃತ್ ನಾಣಯ್ಯ, ಭೀಮಯ್ಯ, ತೇಜಸ್, ಶ್ಲೋಕ್ ಮೇತ್ರಿ, ಚಿರಣ್ ಎನ್. ಪ್ರಭು, ಮುಕ್ತ ವಿಭಾಗದಲ್ಲಿ ರಜತ್ ಗುರುರಾಜ್, ಹೆಚ್.ಎಸ್. ಜೀವನ್, ಟಿ.ಕೆ. ರಾಮು, ಲತೀಶ್, ಪ್ರಮೋದ್, ಸುನಿತ ಪಡೆದುಕೊಂಡರು.
ಬಹುಮಾನ ವಿತರಣೆ : ಪಿಸಿ ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್ ಮಾತನಾಡಿ, ಚೆಸ್ ಆಟ ಎಲ್ಲರಲ್ಲೂ ಆತ್ಮವಿಶ್ವಾಸ ವೃದ್ಧಿಸುವುದರಿಂದ ಜೀವನವನ್ನು ಗೆಲ್ಲಲು ಸಹಕಾರಿ ಯಾಗುತ್ತದೆ. ಹಿಂದೆ ಧರ್ಮಯುದ್ದ ಸಂದರ್ಭ ಸೈನಿಕರು, ಸೇನಾಧಿಪತಿಗಳು ನ್ಯಾಯಾಯುತವಾಗಿ ಯುದ್ಧವನ್ನು ಗೆಲ್ಲಲು ಕಂಡುಕೊAಡು ಕ್ರೀಡೆ ಯಾಗಿದ್ದು, ಇಂದು ಪ್ರಚಲಿತವಾಗಿದೆ. ಯುದ್ಧ ಎಂದಾಕ್ಷಣ ಸ್ಪರ್ಧಿ ಮತ್ತು ಪ್ರತಿಸ್ಪರ್ಧಿಗಳ ಹೋರಾಟಕ್ಕೆ ಬೇಕಾದ ಮೂಲಭೂತ ಸೌಕರ್ಯ, ಆಯುಧಗಳಿಗೂ ಗೌರವ ನೀಡಲಾಗುತ್ತಿತ್ತು. ಹೋರಾಟ ಸಂದರ್ಭ ಆಯುಧ ಕಳೆದುಕೊಂಡ ವಿರೋಧಿಗಳ ಕೈಗೆ ಮತ್ತೆ ಆಯುಧ ಸೇರುವವರೆಗೂ ಯುದ್ಧ ನಿಲ್ಲಿಸಲಾಗುತಿತ್ತು.
ಯುದ್ಧ ನ್ಯಾಯಾಯುತವಾಗಿ ನಡೆಸಲಾಗುತ್ತಿತ್ತು. ಆಗ ಆರಂಭಿಸಿದ ಕ್ರೀಡೆ ಜನರ ಆತ್ಮ ವಿಶ್ವಾಸ ವೃದ್ಧಿಸುತ್ತಿದೆ ಎಂದರು.
ವಕೀಲ ಕಳ್ಳಿಚಂಡ ಅಪ್ಪಣ್ಣ ಮಾತನಾಡಿ, ಮನಸ್ಸನ್ನು ಏಕಾಗ್ರತೆಯಲ್ಲಿ ಇಟ್ಟುಕೊಳ್ಳಲು ಚೆಸ್ ಸಹಕಾರಿ. ಮಕ್ಕಳು ಚೆಸ್ ಕಲಿಯಲು ಮುಂದಾಗಬೇಕಿದೆ ಎಂದರು.
ಸಾಮಾಜಿಕ ಕಾರ್ಯಕರ್ತರಾದ ಶಾಜಿ ಅಚ್ಚುತ್ತನ್, ಮತ್ರಂಡ ದಿಲು ಆಟದ ಮೂಲಕ ಉದ್ಘಾಟಿಸಿದರು. ಪೊನ್ನಂಪೇಟೆ ನಿಸರ್ಗ ಜೆಸಿ ಅಧ್ಯಕ್ಷ ಅಪ್ಪಂಡೇರAಡ ದಿನು, ಕಾರ್ಯದರ್ಶಿ ಚೆಟ್ಟೋಳೀರ ಶರತ್ ಸೋಮಣ್ಣ, ಪಿಸಿ ಕ್ಲಬ್ ಕಾರ್ಯದರ್ಶಿ ಆಂಥೋನಿ, ಅನುದಾನಿತ ಪ್ರೌಡಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕುಪ್ಪಂಡ ತಿಮ್ಮಯ್ಯ ಇದ್ದರು.