ಮಡಿಕೇರಿ, ನ. ೧೮ : ನಗರದ ರಸ್ತೆಗಳ ಅಭಿವೃದ್ಧಿಗೆ ರೂ. ೭೫ ಲಕ್ಷ ವಿಶೇಷ ಅನುದಾನವನ್ನು ಸರಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ಈ ಹಿನ್ನೆಲೆ ನಗರ ಪ್ರದಕ್ಷಿಣೆ ಹಾಕಿ, ಸದಸ್ಯರ ಸಲಹೆಯೊಂದಿಗೆ ಮುನ್ನಡೆ ಯಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಘೋಷಿಸಿದರು.

ನಗರಸಭಾ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತಿಳಿಸಿದ ಶಾಸಕರು, ಎಲ್ಲವೂ ಸರ್ವಋತು ರಸ್ತೆಯಾಗಬೇಕು. ರಸ್ತೆ ಸರಿಪಡಿಸುವುದು ಮೊದಲ ಆದ್ಯತೆಯಾಗಿದೆ. ಮಳೆ ಇದ್ದ ಹಿನ್ನೆಲೆ ಕೆಲಸಗಳು ಸಾಧ್ಯವಾಗಲಿಲ್ಲ.

(ಮೊದಲ ಪುಟದಿಂದ) ಜಿಲ್ಲೆಯ ರಸ್ತೆಯ ಅಭಿವೃದ್ಧಿಗೆ ರೂ. ೧೫೦ ಕೋಟಿ ಅನುದಾನ ಲಭ್ಯತೆ ಇದೆ. ಇದರೊಂದಿಗೆ ಮಡಿಕೇರಿಯ ರಸ್ತೆ ಅಭಿವೃದ್ಧಿಗೆ ಸರಕಾರದ ಗಮನ ಸೆಳೆದು ರೂ. ೭೫ ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದನ್ನು ಮಡಿಕೇರಿಯ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ತಕ್ಷಣ ಟೆಂಡರ್ ಪ್ರಕ್ರಿಯೆ ಕೈಗೊಂಡು ಡಿಸೆಂಬರ್ ಮೊದಲ ವಾರದಿಂದ ಕೆಲಸ ಆರಂಭಿಸುವAತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರೋತ್ಥಾನ ಅಡಿ ಪರಿಣಾಮಕಾರಿ ಕೆಲಸಗಳು ನಡೆದಿಲ್ಲ. ಈ ಬಾರಿ ಆಗಾಗಬಾರದು ಎಂದು ಎಚ್ಚರಿಸಿದರು.