ಮಡಿಕೇರಿ, ನ. ೧೯: ಕೊಡಗು ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ತಾ. ೧೭ ರಿಂದ ಆರಂಭಗೊAಡ ಪಂದ್ಯಾವಳಿಯಲ್ಲಿ ವಿವಿಧ ರೀತಿಯ ಕ್ರೀಡೆಗಳು ನಡೆದವು. ಡಿ.ಎ.ಆರ್., ಪೊಲೀಸ್ ವಿಶೇಷ ಘಟಕ, ಮಹಿಳಾ ಪೊಲೀಸ್, ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ಉಪವಿಭಾಗ ತಂಡಗಳು ಭಾಗವಹಿಸಿದ್ದವು.

ಪೊಲೀಸರು ಕಬಡ್ಡಿ, ಹಗ್ಗಜಗ್ಗಾಟ, ಕ್ರಿಕೆಟ್, ಅಥ್ಲೆಟಿಕ್ಸ್ನಲ್ಲಿ ಭಾಗವಹಿಸುವುದರ ಜೊತೆಗೆ ವೈವಿಧÀ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಕ್ರೀಡಾಕೂಟದ ರಂಗು ಹೆಚ್ಚಿಸಿದರು. ಪೊಲೀಸರ ಕುಟುಂಬ ಕೂಡ ಪಾಲ್ಗೊಂಡು ಖುಷಿ ಅನುಭವಿಸಿತು.

ಕೊನೆಯ ದಿನದಂದು ನಡೆದ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದಕ್ಷಿಣ ವಲಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್ ಮಾತನಾಡಿ, ಕೊಡಗು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ವನ್ಯಜೀವಿ ಮಾನವ ಸಂಘರ್ಷ, ಕೋಮು ಸಂಘರ್ಷದAತಹ ಘಟನೆಗಳಿಂದ ಸೂಕ್ಮ ಪ್ರದೇಶವಾಗಿರುವ ಕೊಡಗಿನಲ್ಲಿ ಕೆಲಸ ಮಾಡುವುದು ಪೊಲೀಸರಿಗೆ ಸವಾಲು ತಂದೊಡ್ಡಿದೆ. ಈ ನಡುವೆಯೂ ಪೊಲೀಸರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಜನರಿಗೆ ನ್ಯಾಯ ಕೊಡಿಸುವ ಕೆಲಸವಾಗುತ್ತಿದೆ. ಇತ್ತೀಚಿಗೆ ರಾಜಕೀಯಪರ-ವಿರೋಧ ವಿಚಾರವೊಂದಕ್ಕೆ

(ಮೊದಲ ಪುಟದಿಂದ) ಸಂಬAಧಿಸಿದAತೆ ಕೊಡಗು ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬೇಕಾಗಿದ್ದ ಅಹಿತಕರ ಘಟನೆ ತಪ್ಪಿಸಿ ಕಾನೂನು ಸುವ್ಯವಸ್ಥೆ ಕಾಪಾಡಿರುವುದು ಶ್ಲಾಘನೀಯ ಎಂದ ಅವರು, ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿ, ದಿನದ ೨೪ ಗಂಟೆ ಕೆಲಸ ಮಾಡುವ ಪೊಲೀಸರ ವೃತ್ತಿ ಒಂದು ಸೇವೆ. ಆರೋಗ್ಯಕರ ಸಮಾಜ ಕಟ್ಟುವುದು ನಮ್ಮ ಕರ್ತವ್ಯವಾಗಿದೆ. ಸಮಾಜ ವಿರೋಧಿ ಚಟುವಟಿಕೆ ನಿಗ್ರಹಿಸಲು ನಾವು ಯೋಚನೆ ಮಾಡಬಾರದು. ಕಾನೂನಿನೊಂದಿಗೆ ಮಾನವೀಯತೆಯಲ್ಲಿಯೂ ಕೆಲಸ ಮಾಡಿದರೆ ಇಲಾಖೆ ಮೇಲೆ ಗೌರವ, ನಂಬಿಕೆ ಹೆಚ್ಚಾಗುತ್ತದೆ. ಕಾನೂನು ಬಾಹಿರ ಕೃತ್ಯವೆಸಗುವವರಿಗೆ ಎಂದಿಗೂ ಬೆಂಬಲ ನೀಡಬಾರದು. ಅಂತವರನ್ನು ಬೇರು ಸಹಿತ ಮಟ್ಟಹಾಕಬೇಕು ಎಂದು ಕರೆ ನೀಡಿದರು.

ನಿಷ್ಪಕ್ಷಪಾತ, ಸಂವಿಧಾನಬದ್ಧವಾಗಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು. ಯಾವುದೇ ಕಪ್ಪುಚುಕ್ಕೆಗೆ ಇಲಾಖೆ ಒಳಗಾಗದಂತೆ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ ಮಾತನಾಡಿ, ಜಂಜಾಟದಲ್ಲಿದ್ದ ಪೊಲೀಸರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮನೋಲ್ಲಾಸ ಅನುಭವಿಸಿದ್ದಾರೆ. ಪೊಲೀಸರು ಕ್ರೀಡೆಯಲ್ಲಿ ತೊಡಗಿಸಿಕೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭ ಪ್ರವೀಣ್ ಮಧುಕರ್ ಪವಾರ್ ಅವರ ಪತ್ನಿ ಅನಿತಾ ಪವಾರ್, ಡಿ.ವೈ.ಎಸ್.ಪಿ.ಗಳಾದ ಗಜೇಂದ್ರ ಪ್ರಸಾದ್, ಗಂಗಾಧರಪ್ಪ, ನಿರಂಜನ್ ರಾಜೇ ಅರಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.