ಮಡಿಕೇರಿ, ನ. ೧೮: ಕೊಡಗು ಜಿಲ್ಲೆಯ ಬ್ರಾಹ್ಮಣ ಸಮಾಜದ ಬಾಂಧವರಿಗೆ ಮೊದಲ ಬಾರಿ

ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದ್ದು, ಸಮಾಜದ ಎಲ್ಲಾ ಬಾಂಧವರು ಪಾಲ್ಗೊಳ್ಳುವಂತೆ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮನವಿ ಮಾಡಿದೆ. ಈ ಕುರಿತು ಇಂದು ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ ಅವರು, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು, ಬ್ರಾಹ್ಮಣ ಸಮಾಜ ಸೋಮವಾರಪೇಟೆ, ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಕುಶಾಲನಗರ, ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಗೋಣಿಕೊಪ್ಪ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ೧೧ ಹಾಗೂ ೧೮ ರಂದು ಜಿಲ್ಲಾ ಮಟ್ಟದಲ್ಲಿ ಬ್ರಾಹ್ಮಣ ಜನಾಂಗದವರಿಗೆ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದರು.

ತಾಲೂಕು ಮಟ್ಟದಲ್ಲಿ ಒಳಾಂಗಣ ಕ್ರೀಡಾಕೂಟಗಳಾದ ಚೆಸ್, ಕೇರಂ ನವೆಂಬರ್ ೧೯ ಹಾಗೂ ೨೦ ರಂದು ಕುಶಾಲನಗರದಲ್ಲಿ, ನವೆಂಬರ್ ೨೭ ರಂದು ಗೋಣಿಕೊಪ್ಪ, ವೀರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ನಡೆಯಲಿವೆ. ಮಡಿಕೇರಿ ತಾಲೂಕು ಮಟ್ಟದ ಸ್ಪರ್ಧೆ ಡಿಸೆಂಬರ್ ೧೮ ರಂದು ಮಡಿಕೇರಿಯಲ್ಲಿ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಆಯ್ಕೆಯಾದ ಸ್ಪರ್ಧಾಳುಗಳು ಡಿಸೆಂಬರ್ ೧೮ ರಂದು ಮಡಿಕೇರಿ ಶ್ರೀ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪ, ಶತಮಾನ ಭವನದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಪಾಲ್ಗೊಳ್ಳಬಹುದಾಗಿದೆ. ರಂಗೋಲಿ ಸ್ಪರ್ಧೆ, ಹೂದಾನಿ ಜೋಡಣೆ, ಹಗ್ಗ ಜಗ್ಗಾಟ,

(ಮೊದಲ ಪುಟದಿಂದ) ಕಪ್ಪೆ ಜಿಗಿತ, ಕ್ವಿಜ್ ಈ ರೀತಿ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್ ೧೧ರಂದು ಕ್ರಿಕೆಟ್ ಪಂದ್ಯಾವಳಿ

ಕ್ರೀಡಾಕೂಟದ ಭಾಗವಾಗಿ ಡಿಸೆಂಬರ್ ೧೧ ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಆಡಳಿತ ಮಂಡಳಿ ನಿರ್ದೇಶಕ ಬಿ.ಕೆ ಜಗದೀಶ್ ಅವರು ಮಾಹಿತಿ ನೀಡಿದರು. ಅಂದಿನ ಪಂದ್ಯಾಟವನ್ನು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕ್ರೀಡಾಕೂಟಕ್ಕೆ ಪ್ರವೇಶಾತಿ ಪಡೆಯುವ ತಂಡದವರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ವಿಜೇತ ತಂಡದವರಿಗೆ ಟ್ರೋಫಿ ನೀಡಲಾಗುವುದಾಗಿ ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಕ್ರಿಕೆಟ್‌ಗೆ ಸಂಬAಧಿಸಿದAತೆ ರವಿಶಂಕರ್-ಮೊ:೯೦೩೫೫೦೨೯೩೫, ಕುಶಾಲನಗರ ತಾಲೂಕು ಮಟ್ಟದ ಕ್ರೀಡೆಗೆ ಸಂಬAಧಿಸಿದAತೆ ರಾಜಶೇಖರ್ - ಮೊ:೯೪೪೮೦೭೪೨೨೬, ವೀರಾಜಪೇಟೆ - ಮಂಜುನಾಥ, ಮೊ: ೭೩೩೮೫೭೮೦೪೮, ಪೊನ್ನಂಪೇಟೆ - ಪ್ರಭಾಕರ ನೆಲ್ಲಿತ್ತಾಯ, ಮೊ:೮೭೬೨೪೭೮೯೮೨, ಸೋಮವಾರಪೇಟೆ - ಸೋಮೇಶ್, ಮೊ:೭೪೦೬೩೭೬೦೬೫, ಮಡಿಕೇರಿ - ಲಲಿತಾ ರಾಘವನ್, ಮೊ:೯೪೪೮೯೭೬೮೩೮ ಅವರುಗಳನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಉಪಾಧ್ಯಕ್ಷ ರಾಮಚಂದ್ರ ಮೊಗೂರು, ಸೋಮವಾರಪೇಟೆ ಬ್ರಾಹ್ಮಣ ಸಮಾಜದ ಆಡಳಿತ ಮಂಡಳಿಯ ಶ್ರೀಕಾಂತ್, ಕೊಡಗು ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಪ್ರಭಾಕರ ನೆಲ್ಲಿತ್ತಾಯ ಅವರು ಹಾಜರಿದ್ದು, ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು.