ಮಡಿಕೇರಿ, ನ. ೧೯: ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ವತಿಯಿಂದ ಮಡಿಕೇರಿಯಲ್ಲಿ ತಾ. ೨೦ ರಂದು (ಇಂದು) ಪರಿಸರ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಪ್ರಮುಖರಲ್ಲಿ ಒಬ್ಬರಾದ ಚಂದ್ರಶೇಖರ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇಕೇರಿಯ ಖಾಸಗಿ ರೆಸಾರ್ಟ್ನಲ್ಲಿ ಸಮಾವೇಶ ನಡೆಯಲಿದೆ. ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆ ತನಕ ನಡೆಯಲಿರುವ ಸಮಾವೇಶದಲ್ಲಿ ವಿವಿಧ ಭಾಗಗಳಿಂದ ಆಗಮಿಸಲಿರುವ ಪರಿಸರ ತಜ್ಞರು ಅವರವರ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸಾಧಕರನ್ನು ಗುರುತಿಸುವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ದಿನಪೂರ್ತಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆರೆಗಳ ಪುನಶ್ಚೇತನ, ಚಿಟ್ಟೆಗಳ ಜೀವನಕ್ರಮ, ಹವಾಮಾನ ಬದಲಾವಣೆ, ಕಸ ನಿರ್ವಹಣೆ ಮತ್ತು ನಗರ ಅರಣ್ಯ, ಸಾವಯವ ಬೇಸಾಯ, ಮ್ಯಾಂಗ್ರೋವ್ ಸಂರಕ್ಷಣೆ, ಸಮುದ್ರ ಮತ್ತು ಜಲಚರ ಜೀವಿಗಳು ಮತ್ತಿತರ ವಿಷಯಗಳ ಬಗ್ಗೆ ಚರ್ಚೆಯೂ ನಡೆಯಲಿದೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.