ಮಡಿಕೇರಿ, ನ. ೧೯: ಕರ್ನಾಟಕ ದಲ್ಲಿ ಸುಮಾರು ಒಂದು ಕೋಟಿಗೂ ಮಿಗಿಲಾಗಿ ಸಹಕಾರಿಗಳು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪೂರ್ವಜರ ಚಿಂತನೆ ಮತ್ತು ಮಾರ್ಗದರ್ಶನದ ಫಲವಾಗಿ ಹಲವಷ್ಟು ಸಹಕಾರ ಸಂಘಗಳು ಸ್ಥಾಪನೆಯಾಗಿ ಇಂದು ನಾವು ಅದರ ಪ್ರಯೋಜನ ಪಡೆಯುವಂತಾಗಿದೆ. ಜಿಲ್ಲೆಯಲ್ಲಿ ಸಹಕಾರ ದವಸ ಭಂಡಾರಗಳ ಪುನಶ್ಚೇತ ನಗೊಳಿಸುವಲ್ಲಿ ಯೂನಿಯನ್ ವತಿಯಿಂದ ಪ್ರಯತ್ನಿಸಲಾಗುತ್ತಿದೆ. ದವಸ ಭಂಡಾರಗಳ ಉಳಿವಿಗಾಗಿ ಹಾಲು ಶೇಖರಣೆ ಹಾಗೂ ಇತರೆ ಚಟುವಟಿಕೆ ಕೈಗೊಳ್ಳಬಹುದೆಂದು ಯೂನಿಯನ್ ಅಧ್ಯಕ್ಷÀ ಎ.ಕೆ. ಮನುಮುತ್ತಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಕಡಂಗ ಪ್ಯಾಕ್ಸ್ ಹಾಗೂ ಅರಪಟ್ಟು ವಿವಿದೊದ್ಧೇಶ ಸಹಕಾರ ದವಸ ಭಂಡಾರದ ಸಂಯುಕ್ತಾಶ್ರಯದಲ್ಲಿ ಅರಪಟ್ಟು ದವಸ ಭಂಡಾರದ ಶತಮಾನೋತ್ಸವ ಸಮಾರಂಭ ಹಾಗೂ ೬೯ ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕಡಂಗ ಪ್ಯಾಕ್ಸ್ನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದ, ಎ.ಕೆ. ಮನು ಮುತ್ತಪ್ಪರವರು, ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ ಜೊತೆಗೆ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ಅಡಿಕೆಗೆ ಉತ್ತಮ ದರ ಬಂದಿದ್ದು, ಕ್ಯಾಂಪ್ಕೋ ಮತ್ತು ಇತರೆ ಸಂಸ್ಥೆಗಳು ಅಡಿಕೆಗೆ ಉತ್ತಮ ದರ ದೊರಕಿಸುವಲ್ಲಿ ಯಶಸ್ವಿಯಾಗಿದೆ. ಅಂತೆಯೇ ಕೇಂದ್ರ ಸರ್ಕಾರ ಸಹ ಸಹಕಾರ ಸಚಿವಾಲಯವನ್ನು ಸ್ಥಾಪಿಸಿ ಸುಮಾರು ೧೯೦೦ ಕೋಟಿಯಷ್ಟು ಮೊತ್ತವನ್ನು ಸಹಕಾರ ಕ್ಷೇತ್ರಕ್ಕೆ ವಿವಿಧ ಯೋಜನೆಗಳ ರೂಪದಲ್ಲಿ ಬಿಡುಗಡೆ ಮಾಡಿದೆ. ಅಂತೆಯೇ ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ ಒದಗಿಸಲು ರೈತ ಉತ್ಪಾದಕ ಸಂಸ್ಥೆಯನ್ನು ಸ್ಥಾಪನೆ ಮಾಡಿದೆ. ಜಿಲ್ಲೆಯಲ್ಲಿ ನಾಪೋಕ್ಲು, ವೀರಾಜಪೇಟೆ, ಸೋಮವಾರಪೇಟೆ ಹಾಗೂ ಇತರೆಡೆಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಗೊಬ್ಬರ, ಕೃಷಿ ಪರಿಕರಗಳನ್ನು ಈ ಕೇಂದ್ರದ ಮೂಲಕ ದೊರಕಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆ ಬೆಳೆಯ ಬೇಕೆಂದು ಕರೆ ನೀಡಿದರು. ಅಂತೆಯೇ ಸಹಕಾರ ಸಂಘಗಳ ಮೂಲಕ ವ್ಯವಹರಿಸಲು, ಸಹಕಾರ ಧವಸ ಭಂಡಾರಗಳ ಏಳಿಗೆಗಾಗಿ ಗದ್ದೆಗಳನ್ನು ಪಾಳು ಬಿಡದೆ ಕೃಷಿ ಚಟುವಟಿಕೆ ನಡೆಸುವಂತೆ ತಿಳಿಸಿದರು.
ದವಸ ಭಂಡಾರದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪೌತಿ ಪಾಲಚಂಡ ಬಿದ್ದಪ್ಪ ಅವರ ಧರ್ಮಪತ್ನಿ ಪಿ. ಮುದ್ದವ್ವ, ಸಂಘದ ಉಪಾಧ್ಯಕ್ಷರಾದ ಮುಕ್ಕಾಟಿರ ಕಿರಣ್ ಬೋಪಯ್ಯ ಹಾಗೂ ಸಂಘದ ಸದಸ್ಯರಾಗಿದ್ದು ಸುವರ್ಣ ವಿವಾಹ ವಾರ್ಷಿಕೋತ್ಸವ ಪೂರೈಸಿದ ಕೋಡಿರ ಕುಶಾಲಪ್ಪ ಮತ್ತು ಪತ್ನಿ ಸೀತವ್ವ, ನಂಬಿಯಪAಡ ಎಂ. ಮಾದಪ್ಪ ಮತ್ತು ಪತ್ನಿ ಬೊಳ್ಳವ್ವ ರವರನ್ನು ಸನ್ಮಾನಿಸಿ ಮಾತನಾಡಿದ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು ಹಾಗೂ ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷರಾದ ಎನ್.ಎ. ರವಿ ಬಸಪ್ಪರವರು, ದವಸ ಭಂಡಾರಗಳ ನಾಶಕ್ಕೆ ಬಿಡಬಾರದು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದವಸ ಭಂಡಾರಗಳು ಜನರ ನೆರವಿಗೆ ನಿಂತು ಹಸಿವನ್ನು ನೀಗಿಸಲು ಸಹಕಾರಿಯಾಗಿದ್ದನ್ನು ನೆನೆಯುತ್ತಾ ಹಿರಿಯರ ಮಾರ್ಗದರ್ಶನ ಹಾಗೂ ಅವರ ಶ್ರದ್ಧೆಯ ಫಲವಾಗಿ ಸಂಘಗಳು ಉಳಿದಿದ್ದು ಮುಂದಿನ ಪೀಳಿಗೆಗೆ ಸಹ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಯನ್ನು ಮುನ್ನಡೆಸ ಬೇಕೆಂದು ಕರೆ ನೀಡಿದರು.
ಆವಿಷ್ಕಾರ ಪೋಷಣೆ, ಸ್ಟಾರ್ಟ್ಅಪ್‌ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯದ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶ್ಯಾಮಲಾ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅರಪಟ್ಟು ಮತ್ತು ಕರಡ ವಿವಿದೊದ್ಧೇಶ ಸಹಕಾರ ದವಸ ಭಂಡಾರದ ಅಧ್ಯಕ್ಷರಾದ ನಂಬಿಯಪAಡ ಎ. ಮಣಿ ಅಯ್ಯಮ್ಮ ರವರು ಮಾತನಾಡಿ, ಹಿರಿಯ ಸಹಕಾರಿಗಳು ಸ್ಥಾಪಿಸಿದಂತಹ ಸಂಘವನ್ನು ಕಾವೇರಿ ಮಾತೆಯ ಅನುಗ್ರಹದಿಂದ ೧೦೦ ವರ್ಷಗಳನ್ನು ಪೂರೈಸಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಕರಡ ಸಹಕಾರ ದವಸ ಭಂಡಾರವು ಅರಪಟ್ಟು ದವಸ ಭಂಡಾರದೊAದಿಗೆ ವಿಲೀನವಾದ ನಂತರದಲ್ಲಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಸಂಘಕ್ಕೆ ದಾಸ್ತಾನು ಮಳಿಗೆಗಾಗಿ ಜಾಗ ಖರೀದಿಸಿ ೧೯೮೬ ರಲ್ಲಿ ಪಾಲಚಂಡ ಬಿದ್ದಪ್ಪರವರು ಮತ್ತು ಇತರ ಅಧ್ಯಕ್ಷತೆಯಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಯಿತು. ಸಂಘಕ್ಕೆ ಭತ್ತದ ರೂಪದ ಸಂಗ್ರಹಣೆ ಕಡಿಮೆ ಯಾದುದರಿಂದ ದವಸ ಭಂಡಾರ ಗಳು ಹೀನಾಯ ಪರಿಸ್ಥಿತಿಗೆ ತಳ್ಳಲ್ಪ ಟ್ಟಿದ್ದು ಎಲ್ಲರೂ ತಮ್ಮ ಗದ್ದೆಗಳನ್ನು ಪಾಳು ಬಿಡದೆ ಭತ್ತ ಬೆಳೆಯಲು ಪ್ರಾಧಾನ್ಯತೆ ನೀಡಬೇಕೆಂದು ಕೋರಿ ಕೊಂಡರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಎಂ. ಪ್ರೇಮ ಸೋಮಯ್ಯ, ವಿ.ಕೆ. ಅಜಯ್ ಕುಮಾರ್, ಅರಪಟ್ಟು ಸಹಕಾರ ದವಸ ಭಂಡಾರದ ನಿರ್ದೇಶಕರುಗಳು ಹಾಗೂ ಕಡಂಗ ಪ್ಯಾಕ್ಸ್ನ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತ ರಿದ್ದರು. ಕಡಂಗ ಪ್ಯಾಕ್ಸ್ನ ಅಧ್ಯಕ್ಷರಾದ ಕೆ.ಎಂ. ತಮ್ಮಯ್ಯ ಸ್ವಾಗತಿಸಿದರೆ, ಕಾರ್ಯಕ್ರಮದ ಪ್ರಾರ್ಥನೆ, ನಿರೂಪಣೆ ಮತ್ತು ವಂದನಾ ರ್ಪಣೆಯನ್ನು ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅರಪಟ್ಟು ದವಸ ಭಂಡಾರದ ವ್ಯವಸ್ಥಾಪಕ ಎಂ.ಯು. ಮೊಹಮ್ಮದ್, ಯೂನಿಯನ್ ಸಿಬ್ಬಂದಿ ಬಿ.ಸಿ. ಅರುಣ್ ಕುಮಾರ್ ಉಪಸ್ಥಿತರಿದ್ದರು.