ವೀರಾಜಪೇಟೆ, ನ. ೧೮: ಈ ವರ್ಷದಲ್ಲಿ ಆಗಾಗ ಮಳೆಯಿಂದಾಗಿ ರಸ್ತೆಗಳು ದುಸ್ಥಿತಿಯಲ್ಲಿದ್ದು ಮಳೆನಿಂತ ಕೂಡಲೇ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸ ಲಾಗುವುದು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು
ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಕೆರೆ ಬಾರಿಕಾಡು ಹಾಗೂ ಬೀಟೆಕಾಡು ಸಂಪರ್ಕ ರಸ್ತೆ ಮತ್ತು ಮಂಜೆಮರದಿAದ ಕೊಟ್ಟೋಳಿ ಪರಿಶಿಷ್ಟ ಜಾತಿ ಕಾಲೋನಿಗೆ ರೂ, ೧೯ ಲಕ್ಷ ಅನುದಾನದಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಬಳಿಕ ಮಾತನಾಡಿ ಟೀಕೆ ಮಾಡವ ಜನರು ಮಾಡಲಿ ಎಲ್ಲರಿಗೂ ಉತ್ತರ ಹೇಳಲು ಸಮಯವಿಲ್ಲ. ಮಳೆ ಬರುವಾಗ ರಸ್ತೆಗೆ ಡಾಂಬರು ಹಾಕಿದರೆ ಪ್ರಯೋಜನವಿಲ್ಲ. ಈಗಾಗಲೇ ಅಮ್ಮತ್ತಿ ಸಿದ್ದಾಪುರ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಗೊಳಿಸಲಾಗುವುದು. ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭ ಸ್ಥಳೀಯರು ಸಹಕಾರ ನೀಡಬೇಕು ಎಂದ ಬೋಪಯ್ಯ ಅವರು ಚುನಾವಣೆ
(ಮೊದಲ ಪುಟದಿಂದ) ಸಂದರ್ಭ ಪಕ್ಷ ಚಿಹ್ನೆ ಗೆದ್ದನಂತರ ಎಲ್ಲರ ಪ್ರತಿನಿಧಿ,
ಪ್ರತಿಯೊಬ್ಬರಿಗೂ ಬದುಕಲು ಮನೆ ಅವಶ್ಯವಿದೆ. ವಿದ್ಯುತ್, ಕುಡಿಯುವ ನೀರು ಮೂಲಭೂತ ಸೌಲಭ್ಯಗಳನ್ನು ಸರಕಾರದಿಂದ ಒದಗಿಸಿಕೊಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ಕೆದಮುಳ್ಳೂರು ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ತೋರಾ ಗ್ರಾಮಗಳಲ್ಲಿ ಅತಿ ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಇಲ್ಲಿನ ಗ್ರಾಮೀಣ ಭಾಗದ ರಸ್ತೆಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕರು ಸರಕಾರದಿಂದ ಹೆಚ್ಚು ಅನುದಾನತಂದು ಗ್ರಾಮದ ಕಾಲೋನಿಗಳಿಗೆ ಉತ್ತಮ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಬಾಕಿ ಉಳಿದಿರುವ ಕೆಲವೆ ರಸ್ತೆಗಳು ಮುಂದಿನ ದಿನದಲ್ಲಿ ಅಭಿವೃದ್ಧಿ ಕಾಣಲಿದೆ ಎಂದರು.
ಕಾAಕ್ರಿಟ್ ರಸ್ತೆ ಉದ್ಘಾಟನೆ ಸಂದರ್ಭ ಗ್ರಾಮದ ಹಿರಿಯರಾದ ಅಬ್ಬಾಸ್, ಕುವೆಲ್ಲರ ಉಮ್ಮರ್, ಗ್ರಾ.ಪಂ. ಸದಸ್ಯ ರಾಮಯ್ಯ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ರಘು ನಾಣಯ್ಯ , ಶಕ್ತಿ ಕೇಂದ್ರದ ರತ್ನ ಅಯ್ಯಣ್ಣ, ಮಧು ದೇವಯ್ಯ, ಉಮ್ಮರ್, ಗುತ್ತಿಗೆದಾರ ಅಚ್ಚಪಂಡ ಹರೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.