ಸೋಮವಾರಪೇಟೆ, ನ.೧೮: ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೧೯ರಂದು (ಇಂದು) ತಾಲೂಕು ಕಂದಾಯ ಪರಿವೀಕ್ಷಕರ ಅಧ್ಯಕ್ಷತೆಯಲ್ಲಿ, ಪೂರ್ವಾಹ್ನ ೧೧ ರಿಂದ ಮಧ್ಯಾಹ್ನ ೧:೩೦ ರ ವರೆಗೆ ಗೋಣಿಮರೂರು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ. ಸಾರ್ವಜನಿಕರು ಅರ್ಜಿ ನಮೂನೆಯೊಂದಿಗೆ ಪಹಣಿ, ಮೃತರ ಮರಣ ಸಮರ್ಥನಾ ಪತ್ರ, ವಂಶವೃಕ್ಷ, ಪಡಿತರ ಚೀಟಿ, ಆಧಾರ್ ಕಾರ್ಡ್ ನೊಂದಿಗೆ ಆಂದೋಲನದಲ್ಲಿ ಭಾಗಿ ಯಾಗಬೇಕೆಂದು ಕಂದಾಯ ಪರಿವೀಕ್ಷಕ ಪ್ರಲ್ಹಾದ ಸಿ.ಎನ್. ತಿಳಿಸಿದ್ದಾರೆ.