ಸೋಮವಾರಪೇಟೆ, ನ. ೧೭: ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಜೇಸಿ ಸಪ್ತಾಹ ಕಾರ್ಯಕ್ರಮದಲ್ಲಿ ೪ ರಿಂದ ೭ ಮತ್ತು ೮ರಿಂದ ೧೦ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮ್ಯಾರಥಾನ್‌ಗೆ ಜೇಸಿ ವೇದಿಕೆ ಎದುರು ಉದ್ಯಮಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪ್ರಖ್ಯಾತ್ ಪ್ರಥಮ, ಯೋಗಿತ್ ದ್ವಿತೀಯ ಹಾಗೂ ಚರಿತ್ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸಂಜನ (ಪ್ರ), ತಗ್ನವ್ (ದ್ವಿ) ಹಾಗೂ ಇಬ್ಬನಿ (ತೃ) ಸ್ಥಾನ ಗಳಿಸಿದರು. ಹೈಸ್ಕೂಲ್ ಬಾಲಕರ ವಿಭಾಗದಲ್ಲಿ ದೀಕ್ಷಿತ್ ಬಿ.ವಿ. (ಪ್ರ), ದೀಕ್ಷಿತ್ (ದ್ವಿ) ಹಾಗೂ ಆರ್ಯಗೌಡ (ತೃ) ಸ್ಥಾನಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸ್ನೇಹ (ಪ್ರ), ಚೈತನ್ಯ (ದ್ವಿ) ಹಾಗೂ ನಿಶಾ (ತೃ) ಸ್ಥಾನ ಗಳಿಸಿದರು. ಜಾನಪದ ಮತ್ತು ಭಾವಗೀತೆ ಗಾಯನ ಸ್ಪರ್ಧೆಯ ೪ ರಿಂದ ೭ ನೇ ತರಗತಿ ವಿಭಾಗದಲ್ಲಿ ಅನ್ವಿತ್ ಬಿ. ಶೆಟ್ಟಿ (ಪ್ರ), ರುಚಿತ (ದ್ವಿ) ಹಾಗೂ ಕೆ.ಆರ್. ಆದಿತ್ಯ (ತೃ) ಸ್ಥಾನ ಗಳಿಸಿದರು. ೮ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ವಿಭಾಗದಲ್ಲಿ ಝಾನ್ಸಿ ಮೋಹನ್ (ಪ್ರ), ಬೆಸ್ನಾ (ದ್ವಿ) ಹಾಗೂ ತ್ರಿಶಾಲ (ತೃ) ಸ್ಥಾನಗಳಿಸಿದರು. ಸಾರ್ವಜನಿಕರ ವಿಭಾಗದಲ್ಲಿ ದಿವ್ಯ ಮೋಹನ್ (ಪ್ರ), ಪುರುಷೋತ್ತಮ್ (ದ್ವಿ) ಹಾಗೂ ಸ್ನೇಹ (ತೃ) ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ಬಿ.ಎಸ್. ಮನೋಹರ್ ಮತ್ತು ಎಸ್.ಎ. ಮುರಳೀಧರ್ ಕಾರ್ಯನಿರ್ವಹಿಸಿದರು.