ಕೊಡ್ಲಿಪೇಟೆ, ನ. ೧೭: ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಖ್ಯಾತಿ ವಿಶ್ವಾಸ್ ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಾಲೇಜಿನಿಂದ ಒಟ್ಟು ೯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾವಗೀತೆ ಸ್ಪರ್ಧೆಯಲ್ಲಿ ಖ್ಯಾತಿ ವಿಶ್ವಾಸ್ ಪ್ರಥಮ ಸ್ಥಾನಗಳಿಸಿದರು. ಸಾಂಸ್ಕೃತಿಕ ಉಸ್ತುವಾರಿಯನ್ನು ವಹಿಸಿದ್ದ ಉಪನ್ಯಾಸಕ ಎಂ.ಕೆ. ಸತೀಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿತ್ತು.

ಪ್ರಶಸ್ತಿ ಪತ್ರ ವಿತರಣೆ : ಕಾಲೇಜಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಗದೀಶ್ ಬಾಬು ವಿದ್ಯಾರ್ಥಿ ಖ್ಯಾತಿ ವಿಶ್ವಾಸ್‌ಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.ಈ ಸಂದರ್ಭ ಉಪನ್ಯಾಸಕರಾದ ಪವಾರ್, ಸೋಮಶೇಖರ್, ಸುಧೀರ್ ಹಾಗೂ ಸಿಬ್ಬಂದಿ ಶಾಂತುಕುಮಾರ್ ಇತರರು ಇದ್ದರು.