ಸುಂಟಿಕೊಪ್ಪ, ನ. ೧೭: ಹರದೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೂತನವಾಗಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಿಸಲಾದ ಕೊಠಡಿಯನ್ನು ಈ ದೇಶದಲ್ಲಿಯೇ ಪ್ರಥಮ ಭಾರಿ ಗ್ರಂಥಾಲಯಕ್ಕೆ ಒತ್ತು ಕೊಟ್ಟ ರಾಜ್ಯ ಎಂದರೆ ಕರ್ನಾಟಕ. ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನದೆಡೆಗೆ ಸಾಗುವಲ್ಲಿ ಗ್ರಂಥಾಲಯಗಳು ಸಹಕಾರಿಯಾಗಲಿವೆ ಎಂದು ಶಾಸಕ ರಂಜನ್ ಹೇಳಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಬಿ.ಡಿ. ಪದ್ಮನಾಭ, ಉಪಾಧ್ಯಕ್ಷೆ ಟಿ.ಪಿ. ಉಷಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಡಿ. ಪೂರ್ಣಿಮ, ಕಾರ್ಯದರ್ಶಿ ನವ್ಯ, ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಸಮಾರಂಭzಲ್ಲಿÀ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ವಾಗತವನ್ನು ಗ್ರಂಥಾಲಯ ಮೇಲ್ವಿಚಾರಕಿ ಮಾಡಿದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ನಿರೂಪಿಸಿದರು.