ಕುಶಾಲನಗರ, ನ. ೧೭: ಗಣಪತಿ ರಥೋತ್ಸವದ ಅಂಗವಾಗಿ ಪಟ್ಟಣದ ಗುಂಡೂರಾವ್ ಬಡಾವಣೆಯ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯುತ್ತಿರುವ ಹತ್ತು ದಿನಗಳ ಅವಧಿಯ ಜಾತ್ರೋತ್ಸವದಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ವಿದೂಷಿ ಪೂರ್ಣಿಮಾ ವಿನಯ್ ಹಾಗೂ ಮಂಜು ಭಾರ್ಗವಿ ಅವರು ತಮ್ಮ ನೃತ್ಯ ಶಾಲೆಗಳ ವಿದ್ಯಾರ್ಥಿಗಳಿಂದ ಮಾಡಿಸಿದ ನೃತ್ಯೋತ್ಸವ ಜನರ ಗಮನ ಸೆಳೆಯಿತು.

ಕುಶಾಲನಗರದ ವೀರಶೈವ ಸಮಾಜದ ಅಕ್ಕನ ಬಳಗದ ಅಧ್ಯಕ್ಷೆ ಲೇಖನಾ ದಯಾನಂದ ಅವರ ತಂಡದಿAದ ನಡೆದ ವಚನೋತ್ಸವ, ಸ್ಥಳೀಯ ಯುವ ಪ್ರತಿಭೆ ಸಂವೇದಿತಾ ಅವರ ಕಂಠ ಸಿರಿಯಿಂದ ಮೊಳಗಿದ ಜಾನಪದ ಗೀತೆ, ಬಿ.ಎಸ್. ಪರಮೇಶ್ ಹಾಗೂ ಮತ್ತಿತರ ಪ್ರತಿಭೆಗಳಿಂದ ಮೂಡಿ ಬಂದ ಕಾರ್ಯಕ್ರಮಗಳು ನಡೆದವು.

ಕುಶಾಲನಗರದ ಗಣಪತಿ ದೇವಾಲಯದ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ನಾಡು ನಾಡದೇವತೆ ಭುವನೇಶ್ವರಿಯ ಸ್ಮರಣೆ ಮಾಡುವ ನವೆಂಬರ್ ನಲ್ಲಿಯೇ ಬರುವ ಗಣಪತಿ ರಥೋತ್ಸವ ಹಾಗೂ ಜಾತ್ರೋತ್ಸವ ವೈಭವಕ್ಕೆ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕಾರ್ಯಕ್ರಮ ಗಳು ಊರಿನ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾತ್ರೋತ್ಸವದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರದಲ್ಲಿ ಪ್ರತೀ ವರ್ಷ ಹತ್ತು ದಿನಗಳ ಕಾಲ ಜರುಗುವ ಜಾತ್ರೋತ್ಸವವನ್ನು ನಾಡ ಹಬ್ಬದ ಭವ್ಯ ಉತ್ಸವವಾಗಿ ಮಾರ್ಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ ದಸರಾ ಮಾದರಿಯಲ್ಲಿ ಕುಶಾಲಗರದ ಉತ್ಸವವನ್ನು ಜನೋತ್ಸವವಾಗಿ ಮಾಡುವ ಚಿಂತನೆ ಇದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲೆಯ ಕರ್ನಾಟಕರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಮಾತನಾಡಿದರು.ಕುಶಾಲನಗರದ ಗಣಪತಿ ದೇವಾಲಯದ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ನಾಡು ನಾಡದೇವತೆ ಭುವನೇಶ್ವರಿಯ ಸ್ಮರಣೆ ಮಾಡುವ ನವೆಂಬರ್ ನಲ್ಲಿಯೇ ಬರುವ ಗಣಪತಿ ರಥೋತ್ಸವ ಹಾಗೂ ಜಾತ್ರೋತ್ಸವ ವೈಭವಕ್ಕೆ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕಾರ್ಯಕ್ರಮ ಗಳು ಊರಿನ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾತ್ರೋತ್ಸವದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರದಲ್ಲಿ ಪ್ರತೀ ವರ್ಷ ಹತ್ತು ದಿನಗಳ ಕಾಲ ಜರುಗುವ ಜಾತ್ರೋತ್ಸವವನ್ನು ನಾಡ ಹಬ್ಬದ ಭವ್ಯ ಉತ್ಸವವಾಗಿ ಮಾರ್ಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ ದಸರಾ ಮಾದರಿಯಲ್ಲಿ ಕುಶಾಲಗರದ ಉತ್ಸವವನ್ನು ಜನೋತ್ಸವವಾಗಿ ಮಾಡುವ ಚಿಂತನೆ ಇದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲೆಯ ಕರ್ನಾಟಕರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಮಾತನಾಡಿದರು.