ವೀರಾಜಪೇಟೆ, ನ.೧೭ : ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ೮ನೇ ವರ್ಷದ “ಕೊಡವ ನಮ್ಮೆ” ಕಾರ್ಯಕ್ರಮಕ್ಕೆ ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಯಿತು.

ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಪಂದ್ಯಾವಳಿ ಉದ್ಘಾಟಿಸಿದರು.

ಬಾಳೆಲೆ, ಮಡಿಕೇರಿ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ಬಾಳೆಲೆ ತಂಡ ಭಾಗವಹಿಸದ ಕಾರಣ ಮಡಿಕೇರಿ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಹುದಿಕೇರಿ ಮತ್ತು ಆರಾಯಿರನಾಡ್ ನಡುವೆ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಎರಡು ಗೋಲು ದಾಖಲಿಸಿ ಸಮಬಲ ಸಾಧಿಸಿದ ಕಾರಣ ಟೈಬ್ರೆಕರ್‌ನಲ್ಲಿ ೩-೨ ಗೋಲುಗಳ ಅಂತರದಲ್ಲಿ ಹುದಿಕೇರಿ ತಂಡ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಮೂರ್ನಾಡು ಮತ್ತು ಟಿ.ಶೆಟ್ಟಿಗೇರಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂರ್ನಾಡು ತಂಡ ೪-೨ ಅಂತರದಲ್ಲಿ ಗೆಲವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ವೀರಾಜಪೇಟೆ ಹಾಗೂ ಕುಶಾಲನಗರ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ವೀರಾಜಪೇಟೆ ತಂಡ ಬಾರದ ಕಾರಣ ಕುಶಾಲನಗರ ತಂಡ ನೇರವಾಗಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

(ಮೊದಲ ಪುಟದಿಂದ) ಬೇಂಗ್‌ನಾಡ್ ಮತ್ತು ಶ್ರೀಮಂಗಲ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಎರಡು ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಿದ ಕಾರಣ ಟೈಬ್ರೇಕರ್‌ನಲ್ಲಿ ಶ್ರೀಮಂಗಲ ತಂಡ ೫-೨ ಗೋಲುಗಳ ಅಂತರದಲ್ಲಿ ಮುಂದಿನ ಹಂತ ಪ್ರವೇಶಿಸಿತು. ಇದಕ್ಕೂ ಮೊದಲು ಒಕ್ಕೂಟದ ಪ್ರಮುಖರು ಅಗ್ನಿ ಚಾಮುಂಡಿ ಹಾಗೂ ಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್, ಮೂರ್ನಾಡು ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ, ಚೆಟ್ಟಳ್ಳಿ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಮಕ್ಕಂದೂರು ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಚೆಯ್ಯಂಡಾಣೆ ಅಧ್ಯಕ್ಷ ಮುಂಡ್ಯೋಳAಡ ಬಿದ್ದಪ್ಪ, ಆರಾಯಿರನಾಡ್ ಅಧ್ಯಕ್ಷ ಅಜ್ಜಿನಿಕಂಡ ಸುಧೀರ್, ಒಕ್ಕೂಟದ ಪೊಮ್ಮಕ್ಕಡ ವಿಭಾಗದ ಅಧ್ಯಕ್ಷÀ ಚಿರಿಯಪಂಡ ಇಮ್ಮಿ ಉತ್ತಪ್ಪ, ಕ್ರೀಡಾ ಸಮಿತಿ ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ಸಲಹೆಗಾರ ಚೆಪ್ಪುಡಿರ ಕಾರ್ಯಪ್ಪ, ಪಂದ್ಯಾವಳಿ ನಿರ್ದೇಶಕ ಕನ್ನಂಬಿರ ಚಿಣ್ಣಪ್ಪ ಉಪಸ್ಥಿತರಿದ್ದರು.

ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತೀತಿರ ಪುಷ್ಪ ಅಪ್ಪಣ್ಣ ಪ್ರಾರ್ಥಿಸಿ, ಮಾಳೇಟಿರ ಶ್ರೀನಿವಾಸ್ ನಿರೂಪಿಸಿದರು. ಪಂದ್ಯಾವಳಿಯ ತೀರ್ಪುಗಾರರಾಗಿ ಮೈಂದಪAಡ ಡ್ಯಾನಿ ದೇವಯ್ಯ, ಅರೆಯಡ ಚಿಣ್ಣಪ್ಪ, ಕಂಬಿರAಡ ಬೋಪಣ್ಣ, ಅಜ್ಜಕಾಳಿರ ಪಳಗಂಪ್ಪ, ಬಲ್ಲಿಚಂಡ ನಾಣಯ್ಯ, ಚೇಂದಿರ ಡ್ಯಾನಿ, ಚೆಕ್ಕೆರ ಆದರ್ಶ್, ತಾಂತ್ರಿಕ ತೀರ್ಪುಗಾರರಾಗಿ ಪಳಂಗAಡ ಅಪ್ಪಣ್ಣ, ಮಾದೇಯಂಡ ಸಂಪಿ ಪೂಣಚ್ಚ, ಕುಯಿಮಂಡ ಕಿರಣ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದಿನ ಪಂದ್ಯ

ಬೆಳಿಗ್ಗೆ ೮.೩೦ಕ್ಕೆ ವೀರಾಜಪೇಟೆ ಗಿ/s ಮೂರ್ನಾಡು, ೧೦.೩೦ಕ್ಕೆ ಮಡಿಕೇರಿ ಗಿ/s ಹುದಿಕೇರಿ ಮಧ್ಯಾಹ್ನ ೧.೩೦ಕ್ಕೆ ಶ್ರೀಮಂಗಲ ತಂಡದೊAದಿಗೆ ವೀರಾಜಪೇಟೆ ಗಿ/s ಮೂರ್ನಾಡು ತಂಡಗಳ ನಡುವೆ ವಿಜೇತ ತಂಡ ಸೆಣಸಾಡಲಿದ್ದು, ಇದು ರೌಂಡ್ ರಾಬಿನ್ ಹಾಕಿ ಪಂದ್ಯಾವಳಿ ಆಗಿರುತ್ತದೆ.

ಮತ್ತೊಂದೆಡೆ ಬೊಳಿಯಂಗಡ ದಾದು ಪೂವಯ್ಯ ಅವರ ನೇತೃತ್ವದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಕಬ್ಬಚ್ಚಿರ ಶರತ್ ಅವರ ನೇತೃತ್ವದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ.

ನಾಲ್ಕು ತಂಡಗಳ (ರೌಂಡ್ ರಾಬಿನ್) ಅಂಕ ಪಟ್ಟಿಯನ್ನು ಹೆಚ್ಚಿನ ಅಂಕ ಪಡೆದ ತಂಡಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆಯಲಿವೆ. ಒಂದು ವೇಳೆ ಸಮ ಅಂಕ ಪಡೆದಲ್ಲಿ ಹೆಚ್ಚು ಗೋಲುಗಳ ಆಧಾರದ ಮೇಲೆ ವಿಜೇತರ ಪಟ್ಟಿ ಪ್ರಕಟ ಮಾಡಲಾಗುವುದು.

ಹಾಕಿ ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.೩೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೨೦,೦೦೦ ನಗದು ಹಾಗೂ ಟ್ರೋಫಿ, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ೧೦,೦೦೦ ರೂ. ನಗದು ಹಾಗೂ ಟ್ರೋಫಿ ನೀಡಲಾಗುತ್ತಿದ್ದು, ಮೂರು ದಿನಗಳ ಕಾಲ ವಿವಿಧ ಸ್ಪರ್ಧೆಗಳು ನಡೆಯಲಿವೆ.