ವೀರಾಜಪೇಟೆ, ನ. ೧೭: ಕೊಡಗು ಜಿಲ್ಲೆಯ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಿತಿಮತಿ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ವತಿಯಿಂದ ಕ್ರೀಡಾ ಪ್ರೌಢಶಾಲೆ ಕೂಡಿಗೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಮೇಲಾಟದಲ್ಲಿ ವೀರಾಜಪೇಟೆಯ ಮೊರಾರ್ಜಿ ವಸತಿ ಶಾಲೆಯ ಬಿ.ಆರ್. ಧನುಶ್ರೀ ೯ನೇ ತರಗತಿ ವಿದ್ಯಾರ್ಥಿನಿ ಹಾಗೂ ಶಶಾಂಕ್ ಎಸ್.ಜೆ. ೧೦ನೇ ತರಗತಿ ವಿದ್ಯಾರ್ಥಿ ಕ್ರಮವಾಗಿ ಓಟದ ನಡಿಗೆ ಹಾಗೂ ಹರ್ಡಲ್ಸ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಸವನಹಳ್ಳಿ ಹಾಗೂ ಕೂಡಿಗೆಯಲ್ಲಿ ನಡೆಸಲಾದ ವಿದ್ಯಾರ್ಥಿಗಳ ಹಾಗೂ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಬಾಲಕಿಯರ ಥ್ರೋಬಾಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದು, ಲಕ್ಷಿ÷್ಮ ಪಿ.ಡಿ., ಚಿನ್ಮಯಿ ಪಿ.ಪಿ. ಮತ್ತು ಧನುಶ್ರೀ ಬಿ.ಆರ್., ಮೂರು ವಿದ್ಯಾರ್ಥಿನಿಯರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

೮ನೇ ತರಗತಿ ವಿದ್ಯಾರ್ಥಿಗಳಾದ ಉಲ್ಲಾಸ್ ಜಿ.ಎಲ್. ಹಾಗೂ ನಿರೀಕ್ಷಾ ಹೆಚ್.ವಿ. ಶಾಟ್‌ಪುಟ್ ಮತ್ತು ಲಾಂಗ್‌ಜAಪ್‌ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಸತಿ ಶಾಲಾ ನೌಕರರ ಕ್ರೀಡಾಕೂಟದಲ್ಲಿ ಶಾಲೆಯ ಪ್ರಾಂಶುಪಾಲ ಷಡಕ್ಷರಿ ಹೆಚ್.ಆರ್. ತಟ್ಟೆ ಎಸೆತದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕಿ ಹಸೀನಾ ಅಲಾರಕಿ ಶಟಲ್ ಬ್ಯಾಡ್ಮಿಂಟನ್‌ನಲ್ಲಿ, ನಯನ ಬಿ.ಬಿ. ಕನ್ನಡ ಶಿಕ್ಷಕಿ ಥ್ರೋಬಾಲ್‌ನಲ್ಲಿ ಹಾಗೂ ಕೃಷ್ಣ ಎಸ್.ಎಂ. ಗುಂಡು ಎಸೆತದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.