ಸೋಮವಾರಪೇಟೆ, ನ. ೧೬: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ತಾ.೧೯ರ ಶನಿವಾರ ಕೊಡ್ಲಿಪೇಟೆ ಹೋಬಳಿಯ ಕಿತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೦ಕ್ಕೆ ನಡೆಯಲಿದೆ ಎಂದು ತಹಶೀಲ್ದಾರ್ ನರಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಮವಾರಪೇಟೆ: ಬೇಳೂರು ವೃತ್ತದ ಪೌತಿಖಾತೆ ಆಂದೋಲನ ಬಳಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನ. ೧೮ರ ಶುಕ್ರವಾರ ನಡೆಯಲಿದೆ ಎಂದು ಕಂದಾಯ ಪರಿವೀಕ್ಷಕ ಸಿ.ಎನ್. ಪ್ರÀಹ್ಲಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೇಳೂರು ಬಸವನಹಳ್ಳಿ, ಕುಸುಬೂರು, ಬಳಗುಂದ ಹಾಗೂ ನಗರೂರು ಗ್ರಾಮಗಳ ಪೌತಿ ಖಾತೆಗೆ ಸಂಬAಧಿಸಿದ ಅರ್ಜಿ ಸಲ್ಲಿಸಬಹುದಾಗಿದೆ.