ಗೋಣಿಕೊಪ್ಪಲು, ನ. ೧೬: ಕೊಡಗಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು, ಆಡಳಿತ ಪಕ್ಷದ ವೈಫಲ್ಯಗಳನ್ನು ಜನರ ಮುಂದಿಟ್ಟು ಕುಮಾರಸ್ವಾಮಿ ಅವಧಿಯಲ್ಲಿ ಕೊಡಗಿಗೆ ನೀಡಿದ ಯೋಜನೆಗಳನ್ನು ಜನರ ಮುಂದಿಡುವುದಾಗಿ ಜೆ.ಡಿ.ಎಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಅವರು ಹೇಳಿದರು. ಜೆ.ಡಿ.ಎಸ್ ತಾಲೂಕು ಸಮಿತಿ ವತಿಯಿಂದ ವೀರಾಜಪೇಟೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ಪಿ. ಎ.ಮಂಜುನಾಥ್ ಮಾತನಾಡಿ ರಾಜ್ಯದ ವಕ್ತಾರರಾಗಿ ಮೇರಿಯಂಡ ಸಂಕೇತ್ ಪೂವಯ್ಯ ಅವರನ್ನು ಪಕ್ಷವು ನೇಮಕಗೊಳಿಸಿದೆ. ಇದರಿಂದ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಹೊಸ ಹುರುಪು ಬಂದAತಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಕೆಲಸ ನಿರ್ವಹಿಸಲಿದ್ದಾರೆ ಎಂದರು. ಸಭೆಯಲ್ಲಿ ತಾಲೂಕು ಜಾತ್ಯತೀತ ಜನತಾದಳದ ಪದಾಧಿಕಾರಿಗಳಾದ ನೂರ್ ಅಹಮ್ಮದ್, ಹರ್ಷ ಟಿ.ಆರ್.ಅಶ್ರಫ್ ಅಲಿ,ಅಪ್ಪನೆರವಂಡ ಸನ್ನು ಕುಶಾಲಪ್ಪ, ಪಂದ್ಯAಡ ರವಿ ಮಾದಪ್ಪ,ಬಾಳೆಕುಟ್ಟಿರ ದಿನಿ ಬೋಪಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.ಸನ್ನು ಕುಶಾಲಪ್ಪ ಸ್ವಾಗತಿಸಿ ನೂರ್ ಅಹಮ್ಮದ್ ವಂದಿಸಿದರು.