ಮಡಿಕೇರಿ, ನ. ೧೬: ಪ್ರಸಕ್ತ (೨೦೨೨-೨೩) ಸಾಲಿನ ತಾಲೂಕು ಬಾಲಭವನ ಶಿಶು ಅಭಿವೃದ್ಧಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಗೀತೆ ಸ್ಪರ್ಧೆಯು ತಾ.೧೮ ರಂದು ಬೆಳಿಗ್ಗೆ ೧೧ ಗಂಟೆಗೆ ಮೂರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಸ್ಪರ್ಧಿಸುವವರು ದೂ.ಸಂ. ೯೭೪೦೦೧೬೩೫೧ ಕರೆ ಮಾಡಿ ಅಥವಾ ಬೆಳಿಗ್ಗೆ ೯.೩೦ ಗಂಟೆಗೆ ಹಾಜರಾಗಿ ನೋಂದಾಯಿಸಿಕೊಳ್ಳಬಹುದು. ಕನ್ನಡ ನಾಡಿನ ಹೆಸರಾಂತ ಕವಿಗಳ/ ಸಾಹಿತಿಗಳು ರಚಿಸಿದ ಸುಗಮ ಸಂಗೀತಗಳು, ಸಿನಿಮಾ ಗೀತೆಗಳನ್ನು ಹಾಡಲು ಅವಕಾಶವಿದೆ. ಒಟ್ಟು ೩ ಗುಂಪುಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು. (೫ ವರ್ಷ ದಿಂದ ೮ ವರ್ಷದ ಮಕ್ಕಳು, ೯ ವರ್ಷದಿಂದ ೧೨ ವರ್ಷದ ಮಕ್ಕಳು, ೧೩ ರಿಂದ ೧೬ ವರ್ಷದ ಮಕ್ಕಳು) ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.