ಮಡಿಕೇರಿ, ನ. ೧೬ : ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ವತಿಯಿಂದ ತಾ. ೧೮ ರಂದು ರೈತ, ರೈತ ಮಹಿಳೆಯರಿಗೆ ಅರಿಶಿನಗುಪ್ಪೆ ಸಿದ್ದಲಿಂಗಪುರ ಗ್ರಾಮದ ಮಂಜುನಾಥ ಸ್ವಾಮಿ ದೇವಾಲಯ ಆವರಣದಲ್ಲಿ ಅಣಬೆ ಬೇಸಾಯ ಮತ್ತು ಮಾರುಕಟ್ಟೆ ವಿಷಯದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಅಣಬೆ ಬೇಸಾಯದ ಪ್ರಗತಿಪರ ರೈತರಿಂದ ತರಬೇತಿ ನಡೆಯಲಿದೆ. ಆಸಕ್ತ ರೈತರು ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕೂಡಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಕೋರಿದ್ದಾರೆ.