ಕುಶಾಲನಗರ, ನ. ೧೬: ಆಂಗ್ಲ ಸೇರಿದಂತೆ ಅನ್ಯ ಭಾಷೆಗಳ ಫಲಕಗಳನ್ನು ತೆರವುಗೊಳಿಸಲು ತಾ. ೩೦ ರತನಕ ಸಮಯವಕಾಶ ನೀಡಲಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿ ಉದಯಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಹಲವು ಭಾರಿ ಸೂಚನೆ ನೀಡಿದ್ದರೂ ಕೆಲವು ಕಡೆ ಯಾವುದೇ ರೀತಿಯ ಸ್ಪಂದನ ದೊರಕದಿರುವುದು ಕಂಡು ಬಂದಿದ್ದು, ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿರುವ ಉದಯಕುಮಾರ್, ತೆರವುಗೊಳಿಸಲು ಪಟ್ಟಣ ವ್ಯಾಪ್ತಿಯಲ್ಲಿ ಮೈಕ್ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.