ಮಡಿಕೇರಿ, ನ. ೧೫: ಜಿಲ್ಲೆಯಲ್ಲಿ ಗುಂಡಿಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿರುವ ರಸ್ತೆಗಳನ್ನು ಸರಿಪಡಿಸಲು ಸಂಬAಧಪಟ್ಟ ಇಲಾಖೆಗಳು ಗಂಭೀರವಾಗಿ ಪರಿಗಣಿಸಿ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದು ಕ್ರಮಕ್ಕೆ ಮುಂದಾಗಬೇಕು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ಸುರಿದ ಮಳೆಯಿಂದ ಕೊಡಗಿನ ರಸ್ತೆಗಳು ಹದಗೆಟ್ಟಿವೆ. ರಸ್ತೆಯೊಂದಿಗೆ ಸೇತುವೆ, ಮೋರಿಗಳು ಹಾನಿಯಾಗಿವೆ. ಇವುಗಳನ್ನು ಮಳೆಗಾಲಕ್ಕೆ ಮುನ್ನ ಸರಿಪಡಿಸಿ ಜನರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಹದಗೆಟ್ಟಿರುವ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ರಾಜ್ಯ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಬಹುತೇಕ ರಸ್ತೆಗಳನ್ನು ಸರಿಪಡಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಾಗಿದ್ದು, ಇದನ್ನು ಸರಿಪಡಿಸುವುದು ಆದ್ಯತೆಯಾಗಿ ತೆಗೆದುಕೊಳ್ಳುವಂತೆ ನಿರ್ದೇಶಿಸಿದರು.

ಈ ಸಂಬAಧ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಈಗಾಗಲೇ ಪತ್ರಿಕೆಗಳಲ್ಲಿ ರಸ್ತೆಯ ಸ್ಥಿತಿಯ ಕುರಿತು ವರದಿಗಳು ಪ್ರಕಟವಾಗಿವೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ರಸ್ತೆ ಹಾನಿಯ ಕುರಿತು ಸಭೆಗೆ ಮಾಹಿತಿ ಒದಗಿಸಿ ಮಳೆಹಾನಿ ಸಂಬAಧದ ರಸ್ತೆ ಕಾಮಗಾರಿಗೆ ರೂ. ೧೨.೮೦ ಕೋಟಿ ವೆಚ್ಚದ ಟೆಂಡರ್ ಕರೆಯಲಾಗುತ್ತದೆ ಎಂದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮಳೆಗಾಲಕ್ಕೆ ಮುನ್ನ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಿ ಮುಗಿಸುವಂತೆ ತಿಳಿಸಿದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಟೆಂಡರ್ ಪ್ರಕ್ರಿಯೆ ತಡವಾಗುತ್ತಿರುವ ಸಂಬAಧ ಆಕ್ಷೇಪ ವ್ಯಕ್ತಪಡಿಸಿದರು.

ಕೊಯನಾಡು, ಕುಶಾಲನಗರದ ತಾವರೆಕೆರೆ ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತ ಬಳಿಕ ಕೆಲಸ ಮಾಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಬೆಳೆಹಾನಿ ಸಮೀಕ್ಷೆ

ಮಳೆಯಿಂದ ಬೆಳೆಗಳ ಹಾನಿ ಸಂಬAಧ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು,

(ಮೊದಲ ಪುಟದಿಂದ) ‘ಡೇಟಾ’ ಸಂಗ್ರಹದ ಬಳಿಕ ಪರಿಹಾರವನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆಗೊಳಿಸಲಾಗುವುದು. ೪೮,೫೮೭ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಮೊದಲ ಹಂತದಲ್ಲಿ ೭ ಲಕ್ಷ ಬಿಡುಗಡೆಯಾಗಿದೆ. ರೂ. ೧೧೦ ಕೋಟಿ ಅಂದಾಜು ಮೊತ್ತವಾಗಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಬೆಳೆಹಾನಿ ಪರಿಹಾರವನ್ನು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖ ಗೊಳ್ಳುವಂತೆ ಸೂಚನೆ ನೀಡಿದರು.

ತಡೆಗೋಡೆ ರಕ್ಷಣೆ

ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಜಿಲ್ಲಾಡಳಿತ ಭವನ ಎದುರಿನ ಬೃಹತ್ ತಡೆಗೋಡೆಯನ್ನು ವೈಜ್ಞಾನಿಕವಾಗಿ ಮತ್ತೊಮ್ಮೆ ಸರಿಪಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ನಾಗರಾಜು ಸಭೆಯಲ್ಲಿ ಹೇಳಿದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಶಾಸಕ ರಂಜನ್, ಈ ಮೊದಲು ನಾನೇ ಅನೇಕ ಬಾರಿ ತಡೆಗೋಡೆ ಕೆಲಸ ಸರಿ ಇಲ್ಲ ಎಂದು ಆಕ್ಷೇಪಿಸಿದ್ದೆ, ಇದೀಗ ರೂ. ೭ ಕೋಟಿ ವೆಚ್ಚದ ತಡೆಗೋಡೆ ಆತಂಕ ಸೃಷ್ಟಿಸಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನುರಿತರಿಂದ ತಡೆಗೋಡೆಯ ರಕ್ಷಣೆಗೆ ಸಲಹೆ ಪಡೆದಿದ್ದು, ಅದರಂತೆ ಕೆಲಸ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ ಸಂದರ್ಭ, ಕೆಲಸ ಸರಿಯಾಗಿ ನಡೆಯದಿದ್ದಲ್ಲಿ ಪಿಟಿಷನ್ ಕಮಿಟಿಗೆ ದೂರು ನೀಡಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಂಜನ್ ಎಚ್ಚರಿಸಿದರು. ಇಲ್ಲಿನ ಬೌಗೋಳಿಕ ವಾತಾವರಣಕ್ಕೆ ಹೊಂದಿಕೊಳ್ಳುವAತೆ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಕಸವಿಲೇವಾರಿಗೆ ಸೂಚನೆ

ಮಡಿಕೇರಿಯಲ್ಲಿ ಗುಡ್ಡದ ಮೇಲೆ ಸಂಗ್ರಹಗೊAಡಿರುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬAಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ೧೫ ದಿನದೊಳಗೆ ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಪ್ರತಾಪ್ ಸಿಂಹ ನಗರಸಭೆ ಪೌರಾಯುಕ್ತ ವಿಜಯ ಅವರಿಗೆ ಸೂಚಿಸಿದರು.

ರೂ. ೪.೮೦ ಕೋಟಿಗೆ ಟೆಂಡರ್ ಕರೆದಿದ್ದು, ಕೆಲ ತಾಂತ್ರಿಕ ಕಾರಣದಿಂದ ಟೆಂಡರ್ ರದ್ದಾಗಿದೆ. ಸದಸ್ಯರ ಸಭೆ ನಡೆಸಿ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದಾಗ, ಕಳೆದ ಸಭೆಯಲ್ಲಿ ತೀರ್ಮಾನವಾಗಿರುವುದರಿಂದ ಸಭೆಯ ಅವಶ್ಯಕತೆ ಇಲ್ಲ. ಶಾಸಕರ ಹಾಗೂ ನಗರಸಭಾ ಅಧ್ಯಕ್ಷರ ಸಲಹೆ ಪಡೆದು ಮುನ್ನಡೆಯುವಂತೆ ತಿಳಿಸಿದರು.

ಇದೇ ರೀತಿ ಪ್ರತಿ ಗ್ರಾ.ಪಂ.ನಲ್ಲಿನ ಕಸವಿಲೇವಾರಿ ಘಟಕದ ಬಗ್ಗೆ ಮಾಹಿತಿ ಪಡೆದರು. ಕಸ ವಿಲೇವಾರಿ ಘಟಕವಿಲ್ಲದ ಜಾಗದಲ್ಲಿ ಘಟಕ ನಿರ್ಮಾಣಕ್ಕೆ ಬೇಕಾದ ಪ್ರಕ್ರಿಯೆ ನಡೆಸುವಂತೆ ಹೇಳಿದರು.

ಹಾಡಿಗಳಿಗೆ ವಿದ್ಯುತ್ ಪೂರೈಸಿ

ವಿದ್ಯುತ್ ಸಂಪರ್ಕ ವಂಚಿತ ಹಾಡಿಗಳಿಗೆ ವಿದ್ಯುತ್ ಪೂರೈಕೆ ಸಂಬAಧ ಸೆಸ್ಕ್ ಸೂಕ್ತ ಕ್ರಮವಹಿಸಬೇಕು. ಅರಣ್ಯ ಇಲಾಖೆ ಅಡ್ಡಿಪಡಿಸುವ ಜಾಗದಲ್ಲಿ ತಲೆದೋರುವ ಸಮಸ್ಯೆಗಳನ್ನು ಸಮನ್ವಯತೆ ಸಾಧಿಸಿ ಪರಿಹರಿಸುವಂತೆ ಪ್ರತಾಪ್ ಸಿಂಹ ಹೇಳಿದರು.

ಚೆಸ್ಕಾಂ ಅಧಿಕಾರಿ ಅನಿತಾ ಬಾಯಿ ಮಾತನಾಡಿ, ಅರಣ್ಯ ಇಲಾಖೆ ಅಡ್ಡಿ ಇರುವ ಪ್ರದೇಶದಲ್ಲಿ ಸೋಲಾರ್ ನೀಡಲಾಗಿದೆ ಎಂದು ಹೇಳಿದರು. ನಾಗರಹೊಳೆ ಅರಣ್ಯಾಧಿಕಾರಿ ಗೋಪಾಲ್ ಮಾತನಾಡಿ, ಆನ್‌ಲೈನ್‌ನಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಆಗಿಲ್ಲದ ಕಾರಣ ವಿದ್ಯುತ್ ಸಂಪರ್ಕ ನೀಡಲು ಅನುಮತಿ ನೀಡಿಲ್ಲ. ಅರ್ಜಿ ಸಲ್ಲಿಸಿದ್ದಲ್ಲಿ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಡಾ.ಸತೀಶ ಮಾತನಾಡಿ, ಅಗತ್ಯ ಇರುವ ಕಡೆ ಟ್ರಾನ್ಸ್ಫಾರಂ ಒದಗಿಸಿ ಎಂದರು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಶ್ರಮಿಸಬೇಕು. ಈ ಸಂಬAಧ ನೇಮಿಸಿರುವ ನೋಡೆಲ್ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಈ ಬಾರಿ ಯಾವುದೇ ಕಾರಣಕ್ಕೂ ಫಲಿತಾಂಶದಲ್ಲಿ ಹಿನ್ನಡೆಯಾಗಬಾರದು ಎಂದು ಪ್ರತಾಪ್ ಸಿಂಹ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಸ್ಪತ್ರೆ ಡೀನ್ ಡಾ.ಕಳ್ಳಿಚಂಡ ಕಾರ್ಯಪ್ಪ ೨೦೨೩ರ ಹೊತ್ತಿಗೆ ಹೊಸ ೨ ಹೆಚ್ಚುವರಿ ಕಟ್ಟಡಗಳು ನಿರ್ಮಾಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ಅರಣ್ಯ ಅಧಿಕಾರಿಗಳಾದ ಎ.ಟಿ. ಪೂವಯ್ಯ, ಶಿವರಾಂ, ಸಮಿತಿ ಸದಸ್ಯರು ಹಾಜರಿದ್ದರು.ಡಾ. ಆಕಾಶ್, ಅರಣ್ಯ ಅಧಿಕಾರಿಗಳಾದ ಎ.ಟಿ. ಪೂವಯ್ಯ, ಶಿವರಾಂ, ಸಮಿತಿ ಸದಸ್ಯರು ಹಾಜರಿದ್ದರು.