ಕೂಡಿಗೆ, ನ. ೧೫: ಕೂಡಿಗೆಯಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಆವರಣದಲ್ಲಿರುವ ಬಾಲಕರ ವಸತಿ ನಿಲಯ, ಬಾಲಕಿಯರ ವಸತಿ ನಿಲಯ ಮತ್ತು ಒಳ ಕ್ರೀಡಾಂಗಣ ಸೇರಿದಂತೆ ವಿದ್ಯುತ್ ಉಪಕರಣಗಳ ಅಳವಡಿಕೆ, ಮತ್ತು ಮೈದಾನದ ಎರಡು ಭಾಗಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆಗೆ ಸೇರಿದಂತೆ ಉಪ ಕಾಮಗಾರಿಗಳಿಗೆ ರೂ. ೨೪ ಲಕ್ಷ ವೆಚ್ಚದ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆಯನ್ನು ನೆರವೇರಿಸಿದರು.

ನಂತರ ಮಾತನಾಡಿ ಶಾಸಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಶಾಲೆಗೆ ಅತಿ ಮುಖ್ಯವಾದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಂತರ ಮಾತನಾಡಿ ಶಾಸಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಶಾಲೆಗೆ ಅತಿ ಮುಖ್ಯವಾದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ಭೋಗಪ್ಪ, ಚಂದ್ರಶೇಖರ್, ತಾಲೂಕು ಬಿಜೆಪಿ ಮಂಡಲ ಉಪಾಧ್ಯಕೆÀ್ಷ ಕೆ. ವರದ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸಾವಿತ್ರಿ ರಾಜನ್, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ, ಬಸವತ್ತೂರು ಬೂತ್ ಸಮಿತಿಯ ಅಧ್ಯಕ್ಷ ಆರ್.ಕೆ. ಕೃಷ್ಣ, ಕ್ರೀಡಾ ಶಾಲೆ ಮುಖ್ಯೋಪಾಧ್ಯಾಯ ದೇವಕುಮಾರ್, ತರಬೇತಿದಾರರಾದ ವೆಂಕಟೇಶ, ಮಂಜುನಾಥ, ಸೇರಿದಂತೆ ವಿವಿಧ ವಿಭಾಗದ ತರಬೇತಿದಾರರು ಮತ್ತು ಶಿಕ್ಷಕ ವೃಂದ ಸೇರಿದಂತೆ ಗ್ರಾಮದ ಪ್ರಮುಖರಾದ ಪ್ರಕಾಶ್, ಧರ್ಮ, ಸಣ್ಣ, ಪ್ರಭು ಹಾಗೂ ಬಿ.ಜೆ.ಪಿ. ಘಟಕದ ವಿವಿಧ ಪದಾಧಿಕಾರಿಗಳು ಹಾಜರಿದ್ದರು.