ವೀರಾಜಪೇಟೆ, ನ. ೧೫: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಯೋರ್ವನನ್ನು ನಿರಪರಾಧಿ ಎಂದು ಪರಿಗಣಿಸಿ ವೀರಾಜಪೇಟೆ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಅವರು ಖುಲಾಸೆಗೊಳಿಸಿದ್ದಾರೆ.

ತಾ. ೧೮.೦೭.೨೦೧೯ ರಂದು ಶ್ರೀಮಂಗಲ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಸುಬ್ರಮಣಿ ಎಂಬಾತನನ್ನು ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದಡಿ ಶ್ರೀಮಂಗಲ ಪೊಲೀಸರು ಬಂಧಿಸಿದ್ದರು. ಸಂತ್ರಸ್ತೆ ಗರ್ಭಿಣಿ ಆದ ಸಂದÀರ್ಭ ಸ್ಥಳೀಯ ಅಂಗನವಾಡಿಗೆ ತೆರಳಿ ತಾಯಿ ಕಾರ್ಡ್ ಮಾಡುವಾಗ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆಕೆ ಅಪ್ರಾಪ್ತಳಾಗಿದ್ದರಿಂದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತಾ. ೩೧.೦೭.೨೦೨೦ ರಂದು ಸುಬ್ರಮಣಿ ಜಾಮೀನು ಪಡೆದು ಹೊರ ಬಂದಿದ್ದ. ಈ ಪ್ರಕರಣ ಸಂಬAಧ ಶ್ರೀಮಂಗಲ ಪೊಲೀಸರು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಾಧಾರಗಳನ್ನು ನೀಡದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಸುಬ್ರಮಣಿಯನ್ನು ನಿರಪರಾಧಿ ಎಂದು ಪರಿಗಣಿಸಿ ದೋಷ ಮುಕ್ತ ಗೊಳಿಸಿದರು. ಸುಬ್ರಮಣಿ ಪರ ವಕೀಲ ಕೀತಿಯಂಡ ಪ್ರದ್ಯುಮ್ನ ವಾದಿಸಿದರು.